ಅಬುಧಾಬಿಯಲ್ಲಿ ಪ್ರಥಮ ಹಿಂದೂ ದೇವಾಲಯ ಶಿಲಾನ್ಯಾಸಕ್ಕೆ ಕ್ಷಣಗಣನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಅಬುಧಾಬಿ, ಏ.20- ಸಂಯುಕ್ತ ಅರಬ್ ಗಣರಾಜ್ಯದ(ಯುಎಇ) ರಾಜಧಾನಿ ಅಬುಧಾಬಿಯಲ್ಲಿ ಪ್ರಪ್ರಥಮ ಹಿಂದೂ ದೇವಾಲಯ ನಿರ್ಮಾಣದ ಶಂಕು ಸ್ಥಾಪನೆಗೆ ವೇದಿಕೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಹಿರಿಯ ಧಾರ್ಮಿಕ ಮುಖಂಡರುಗಳು ಅಬುಧಾಬಿಗೆ ತೆರಳಿದ್ದಾರೆ.

ಗುರುಮಹಾಂತ ಸ್ವಾಮೀಜಿ ಮಹಾರಾಜ್ ನೇತೃತ್ವದ ಧಾರ್ಮಿಕ ಮುಖಂಡರು ಮತ್ತು ಸಾಧು-ಸಂತರ ನಿಯೋಗವನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಇ ಸಹಿಷ್ಣುತೆ ಸಚಿವ ಶೇಖ್ ನಹಯನ್ ಬಿನ್ ಮುಬಾರಕ್ ಆತ್ಮಿಯವಾಗಿ ಸ್ವಾಗತಿಸಿದರು.

ಆಗರ್ಭ ಶ್ರೀಮಂತ ಬಿ.ಆರ್.ಶೆಟ್ಟಿ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.  ಭಾರತ ಮತ್ತು ವಿಶ್ವದ ವಿವಿಧೆಡೆ ನೂರಾರು ಹಿಂದೂ ದೇವಸ್ಥಾನಗಳು ಮತ್ತು ಮಠ ಮಂದಿರಗಳನ್ನು ನಿರ್ವಹಿಸುತ್ತಿರುವ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ ಬಿಎಬಿಎಸ್ ಸ್ವಾಮಿನಾಥನ್ ಸಂಸ್ಥಾನದ ಅಧ್ಯಕ್ಷರು ಆಗಿರುವ ಮಹಾಂತ ಸ್ವಾಮಿ ಮಹಾರಾಜ್ ಅಬುಧಾಬಿ ಹೊರವಲಯದಲ್ಲಿ ಪ್ರಪ್ರಥಮ ಹಿಂದೂ ದೇವಾಲಯ ನಿರ್ಮಾಣದ ಉಸ್ತುವಾರಿ ಹೊತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಮಹಾಂತ ಅವರು, ಜುಮೇರಾ ಪಾರ್ಕ್‍ನಲ್ಲಿ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡರು.

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin