ಚಂದ್ರನ ಮೇಲೆ ಕಾಲಿಡಲಿದ್ದಾಳೆ  ಪ್ರಥಮ ಅಮೆರಿಕನ್ ಮಹಿಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮೇ 7- ಚಂದ್ರನ ಮೇಲೆ ಮಹತ್ವದ ಸಂಶೋಧನೆಯನ್ನು ಅಮೆರಿಕ ಮತ್ತೆ ಮುಂದುವರೆಸಲಿದೆ ಎಂದು ಉಪಾಧ್ಯಕ್ಷ ಮೈಕ್‍ಫೆನ್ಸ್ ಹೇಳಿದ್ದಾರೆ.

ಇನ್ನು ಐದು ವರ್ಷಗಳಲ್ಲಿ ಚಂದ್ರನ ಮೇಲೆ ಅಮೆರಿಕ ಮತ್ತಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಸಲಿದೆ. ಈ ಯೋಜನೆಯಲ್ಲಿ ಪ್ರಥಮ ಬಾರಿಗೆ ಅಮೆರಿಕನ್ ಮಹಿಳೆಯೊಬ್ಬರು ಚಂದ್ರಲೋಕಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

ವಾಷಿಂಗ್ಟನ್‍ನಲ್ಲಿ ಉಪಗ್ರಹ-2019 ಸಮಾವೇಶ ಉದ್ದೇಶಿಸಿ ಮಾತನಾಡಿದ ಫೆನ್ಸ್ ಅವರು, ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಚಂದ್ರಯಾನ ಯೋಜನೆಯನ್ನು ಮತ್ತಷ್ಟು ಕೈಗೊಳ್ಳುವಂತೆ ಈಗಾಗಲೇ ಅಮೆರಿಕ ಬಾಹ್ಯಾಕಾಶ ಸಂಸ್ಥೆ-ನಾಸಾಗೆ ತಿಳಿಸಿದ್ದಾರೆ.

ಹೀಗಾಗಿ ಈ ನಿಟ್ಟಿನಲ್ಲಿ ಸಂಶೋಧನೆಗಳು ಆರಂಭವಾಗಿವೆ ಎಂದರು. ಹಲವು ದೇಶಗಳು ಈಗಾಗಲೇ ಚಂದ್ರಯಾನ ಯೋಜನೆಯಲ್ಲಿ ನಿರತವಾಗಿವೆ. ಆದರೆ, ಅಮೆರಿಕ ನಡೆಸುವ ಸಂಶೋಧನೆ ಇದಕ್ಕಿಂತಲೂ ತೀರ ಭಿನ್ನ ಮತ್ತು ಅತ್ಯಾಧುನಿಕ ವಿಧಾನದ್ದಾಗಿರುತ್ತದೆ ಎಂದು ಫೆನ್ಸ್ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ