ಭಾರತದ ಚೊಚ್ಚಲ ವಿಶ್ವಕಪ್ ಗೆದ್ದು ಇಂದಿಗೆ 38ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಕ್ರಿಕೆಟ್ ಅಂಗಳಕ್ಕೆ ಅಂಬೆಗಾಲಿಟ್ಟ ಭಾರತ ತಂಡವನ್ನು ಆರಂಭದಲ್ಲಿ ಇಂಗ್ಲೆಂಡ್ ಸೇರಿದಂತೆ ಹಲವು ಕ್ರಿಕೆಟ್ ಸಂಸ್ಥೆಗಳು ಹೀಯಾಳಿಸಿದ್ದವು, ಆದರೆ 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದ ನಂತರ ಇಡೀ ವಿಶ್ವವೇ ಭಾರತ ತಂಡದತ್ತ ತಿರುಗಿ ನೋಡಿದ್ದು ಐತಿಹಾಸಿಕವೇ ಸರಿ. ಕಪಿಲ್‍ದೇವ್ ನಾಯಕತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಏರಿಸಿಕೊಂಡು ಇಂದಿಗೆ 38 ವರ್ಷಗಳು ಸಂದಿವೆ.

ಆ ಋತುವಿನಲ್ಲೂ ಭಾರತ ಕಳಪೆ ಪ್ರದರ್ಶನ ತೋರಿ ಲೀಗ್‍ನಿಂದಲೇ ಹೊರಬಿದ್ದು ವೆಸ್ಟ್‍ಇಂಡೀಸ್ ಅಥವಾ ಆಸ್ಟ್ರೇಲಿಯಾ ಚಾಂಪಿಯನ್ ಆಗುತ್ತದೆ ಎಂದು ಬಿಂಬಿಸಿದ್ದರಾದರೂ ಆಸ್ಟ್ರೇಲಿಯಾದ ಮಾಜಿ ನಾಯಕ ಕಿಮ್ ಹ್ಯೂಜ್ಸ್ ಈ ಬಾರಿ ಭಾರತವೇ ಚಾಂಪಿಯನ್ ಎಂದು ಭವಿಷ್ಯ ನುಡಿದಿದ್ದರು, ಅವರ ಭವಿಷ್ಯ ನಿಜವಾಗಿದ್ದು 1983ರ ಜೂನ್ 25 ರಂದು ಲಾಡ್ರ್ಸ್‍ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ವೆಸ್ಟ್‍ಇಂಡೀಸ್ ವಿರುದ್ಧ ವಿರೋಚಿತ ಗೆಲುವು ಸಾಧಿಸುವ ಮೂಲಕ.

ಅದಕ್ಕೂ ಮುನ್ನ 1974 ಮತ್ತು 1978ರ ವಿಶ್ವಕಪ್‍ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಭಾರತ ತಂಡ 1983ರಲ್ಲಿ ಚೊಚ್ಚಲ ವಿಶ್ವ ಮುಕುಟವನ್ನು ಗೆದ್ದು ಇಡೀ ವಿಶ್ವದ ಗಮನವನ್ನೇ ಸೆಳೆದಿತ್ತು.

# ವಿಶ್ವಕಪ್‍ಗೂ ಮುನ್ನವೇ ವಿಂಡೀಸ್‍ಗೆ ಸೋಲು:
1983ರ ವಿಶ್ವಕಪ್ ಆಯೋಜನೆಗೂ ಮುನ್ನವೇ ವೆಸ್ಟ್‍ಇಂಡೀಸ್ ಪ್ರವಾಸ ಕೈಗೊಂಡಿದ್ದ ಕಪಿಲ್ ಪಡೆ ಕ್ಲೇವ್ ಲಾರ್ಡ್‍ರ ಪಡೆಯನ್ನು ಮಣಿಸಿ ಸರಣಿಯನ್ನು ವಶಪಡಿಸಿಕೊಂಡಿತ್ತಾದರೂ ಇದು ಭಾರತಕ್ಕೆ ಸಿಕ್ಕ ತಾತ್ಕಾಲಿಕ ಗೆಲುವು ಈ ಸಾಧನೆಯನ್ನು ಭಾರತ ವಿಶ್ವಕಪ್‍ನಲ್ಲಿ ತೋರಲಾರದು ಎಂದು ಆಗಿನ ಕೆಲವು ಪತ್ರಿಕೆಗಳು ಬಿಂಬಿಸಿದ್ದವು, ಆದರೆ ಅವರ ಹೇಳಿಕೆಯನ್ನು ಕಪಿಲ್‍ದೇವ್ ಪಡೆ ಸುಳ್ಳು ಮಾಡಿ ಲೀಗ್ ಸೇರಿದಂತೆ ಫೈನಲ್‍ನಲ್ಲೂ ಬಲಿಷ್ಠ ವೆಸ್ಟ್‍ಇಂಡೀಸ್ ಪಡೆಗೆ ಸೋಲಿನ ರುಚಿಯನ್ನು ಕಪಿಲ್ ಪಡೆ ತೋರಿಸಿತ್ತು.

# ಆಟಗಾರರ ಸಾಧನೆ
*ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ಕಪಿಲ್‍ದೇವ್ ಅವರು ಅಜೇಯ 175 ರನ್ ಗಳಿಸಿದ್ದಲ್ಲದೆ ಬೌಲಿಂಗ್‍ನಲ್ಲೂ ಮಿಂಚಿ 17/5 ವಿಕೆಟ್‍ಗಳನ್ನು ಕೆಡವಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
* ಆಡಿದ 8 ಪಂದ್ಯಗಳಿಂದ ಕಪಿಲ್‍ದೇವ್ ಒಟ್ಟು 303 ರನ್‍ಗಳನ್ನು ಕಲೆ ಹಾಕಿದ್ದರು.
* ವಿಕೆಟ್ ಕೀಪರ್ ಆಗಿದ್ದ ಸಯ್ಯದ್ ಕಿರ್ಮಾನಿ ಜಿಂಬಾಬ್ವೆ ವಿರುದ್ಧದ ಪಂದ್ಯ ದಲ್ಲಿ 5 ಆಟಗಾರರಿಗೆ ತಮ್ಮ ಚುರುಕಿನ ಫೀಲ್ಡಿಂಗ್‍ನಿಂದ ಪೆವಿಲಿಯನ್ ಹಾದಿ ತೋರಿಸಿದ್ದರು.
* ಸತತ ಎರಡು ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಪಡೆದ ಸಾಧನೆಯನ್ನು ಮೊಹಿಂದರ್ ಅಮರ್‍ನಾಥ್ ಅವರ ಪಾಲಾಯಿತು. ಅವರು ಸೆಮಿಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್‍ನಲ್ಲಿ ವೆಸ್ಟ್‍ಇಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿಸಿ ಸತತ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
* ವೆಸ್ಟ್‍ಇಂಡೀಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಬಾರಿಸಿದ 38 ರನ್‍ಗಳನ್ನು ಗರಿಷ್ಠ ಸ್ಕೋರ್ ಆಗಿತ್ತು.
* ಎರಡು ಬಾರಿ ವಿಶ್ವಚಾಂಪಿಯನ್ ಆಗಿದ್ದ ಬಲಿಷ್ಠ ವೆಸ್ಟ್‍ಇಂಡೀಸ್ ತಂಡವನ್ನು ವಿಶ್ವಕಪ್‍ನಲ್ಲಿ ಎರಡು ಬಾರಿ ಸೋಲಿಸಿದ ಕೀರ್ತಿಯೂ ಭಾರತಕ್ಕೆ ಸಲ್ಲುತ್ತದೆ. ಭಾರತ ಲೀಗ್‍ನಲ್ಲಿ 34 ರನ್, ಫೈನಲ್‍ನಲ್ಲಿ 43 ರನ್‍ಗಳಿಂದ ಸೋಲಿಸಿತ್ತು.

# 1983ರ ವಿಶ್ವಕಪ್‍ನಲ್ಲಿ ಭಾರತ ತಂಡದ ಪಯಣ
9-6-1983: ಭಾರತಕ್ಕೆ ವೆಸ್ಟ್‍ಇಂಡೀಸ್ ವಿರುದ್ಧ 13 ರನ್ ಗೆಲುವು
ಭಾರತ-262/8 (60 ಓವರ್), ವೆಸ್ಟ್‍ಇಂಡೀಸ್ 228/10 (54.1 ಓವರ್)
11- 6-1983:ಭಾರತಕ್ಕೆ 5 ವಿಕೆಟ್‍ಗಳ ಗೆಲುವು
ಜಿಂಬಾಬ್ವೆ 155/10(51.4 ಓವರ್), ಭಾರತ 157/5 (37.3 ಓವರ್)
13-6-1983:ಆಸ್ಟ್ರೇಲಿಯಾಕ್ಕೆ 162 ರನ್‍ಗಳ ಗೆಲುವು
ಆಸ್ಟ್ರೇಲಿಯಾ 320/9 (60 ಓವರ್), ಭಾರತ 158 (37.5 ಓವರ್)
15-6-1983: ವೆಸ್ಟ್‍ಇಂಡೀಸ್‍ಗೆ 66 ರನ್‍ಗಳ ಗೆಲುವು
ವೆಸ್ಟ್‍ಇಂಡೀಸ್:282/9, ಭಾರತ 216/10 (53.1 ಓವರ್)
18-6-1983: ಭಾರತಕ್ಕೆ 31 ರನ್‍ಗಳ ಗೆಲುವು
ಭಾರತ: 266/8 , ಜಿಂಬಾಬ್ವೆ :235/10 (57 ಓವರ್)
20-6-1983: ಭಾರತಕ್ಕೆ 118 ರನ್‍ಗಳ ಗೆಲುವು
ಭಾರತ: 247/10 (55.5ಓವರ್),
ಆಸ್ಟ್ರೇಲಿಯಾ: 129/10 (38.2 ಓವರ್)
ಸೆಮಿಫೈನಲ್
22-6-1983: ಭಾರತಕ್ಕೆ 6 ವಿಕೆಟ್‍ಗಳ ಗೆಲುವು
ಇಂಗ್ಲೆಂಡ್ 213/10 (60 ಓವರ್), ಭಾರತ 217/4(54.4 ಓವರ್)
ಫೈನಲ್
25-6-1983: ಭಾರತಕ್ಕೆ 43 ರನ್‍ಗಳ ಗೆಲುವು
ಭಾರತ: 183/10 (54.4ಓವರ್), ವೆಸ್ಟ್‍ಇಂಡೀಸ್ 140 (52 ಓವರ್)

Facebook Comments