ಮೀನುಗಾರರ ಸಾಲ ಮನ್ನಾಕ್ಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.24- ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರ ಬ್ಯಾಂಕ್ ಸಾಲ ಮನ್ನಾ ಮಾಡುವಂತೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಭೀಕರ ಮತ್ಸ್ಯ ಕ್ಷಾಮ ಪರಿಣಾಮ ಮೀನುಗಾರಿಕೆ ಇಳಿಕೆ ಯಾಗಿದ್ದು ಮೀನುಗಾರರ ಕುಟುಂಬ ಸಂಕಷ್ಟದಲ್ಲಿದೆ ಅದರಿಂದ ಮೀನುಗಾರರ ಸಾಲ ಮನ್ನಾ ಮಾಡಬೇಕೆಂದು ಮನವಿ ಮಾಡಿದರು.

ಕರ್ನಾಟಕ ಕರಾವಳಿಯಲ್ಲಿ4750 ಯಾಂತ್ರಿಕ ಬೋಟ್‍ಗಳು 7500 ಹೆಚ್ಚು ನಾಡದೋಣಿಗಳು ಕೆಲಸ ಮಾಡುತ್ತಿದ್ದು ಸುಮಾರು5 ಸಾವಿರ ಕೋಟಿಗೂ ಹೆಚ್ಚು ವಿದೇಶಿ ವಿನಿಮಯ ಗಳಿಸುತ್ತಿದೆ ಆದರೆ ಭೀಕರ ಮಸ್ತ್ಯ ಕ್ಷಾಮ ದಿಂದ ಮೀನುಗಾರರು ಉದ್ಯೋಗ ಕಳೆದುಕೊಂಡಿದ್ದಾರೆ ನಷ್ಟದಿಂದ ಬ್ಯಾಂಕಿನ ಸಾಲ ಮತ್ತು ಬಡ್ಡಿ ಪಾವತಿ ಸಲು ಆಗುತ್ತಿಲ್ಲ ಅದರಿಂದ ಸರ್ಕಾರ ಸಾಲವನ್ನು ಮನ್ನಾ ಮಾಡಬೇಕು ಮತ್ತು ಮೀನುಗಾರಿಕೆ ಸಂಬಂಧಪಟ್ಟ ಸಾಲಗಳಿಗೆ ಕನಿಷ್ಠ 4% ಬಡ್ಡಿದರ ಸಾಲ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಮ್ಮ ಬೇಡಿಕೆಗಳನ್ನು ಸರ್ಕಾರ ನೆರವೇರಿಸದಿದಲ್ಲಿ ಮೀನುಗಾರರು ಸಂಪೂರ್ಣ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಮಾಡಬೇಕಾಗುವುದು ಅನಿವಾರ್ಯ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರ ನೀಡುತ್ತಿರುವ ಕರ ರಿಯಾಯಿತಿ ಡೀಸೆಲ್ ಪೂರೈಕೆ ಪದ್ಧತಿ ಬದಲಾಯಿಸಿ ವಾರ್ಷಿಕ ಕೋಟದಲ್ಲಿ ಡೀಸೆಲ್ ನೀಡಬೇಕು, ನಾಡದೋಣಿಗಳಿಗೆ ಬೇಕಾಗುವಷ್ಟು ಕರ ರಹಿತ ಸೀಮೆಎಣ್ಣೆ ನೀಡಬೇಕು ಎಂದು ಒತ್ತಾಯಿಸಿದರು.

ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ಸಾವಿರಾರು ಕೋಟಿ ವಿದೇಶಿ ವಿನಿಮಯ ಮಾಡುತ್ತಿರುವ ಮೀನುಗಾರರಿಗೆ ಪ್ರಸ್ತುತ 2021-22 ನೇ ಬಜೆಟ್‍ನಲ್ಲಿ 10 ಸಾವಿರ ಕೋಟಿ ಪ್ಯಾಕೇಜ್ ಅನ್ನು ಕನ್ನಡಕ ರಾಜ್ಯ ಕರಾವಳಿ ಹಾಗೂ ಒಳನಾಡು ಮೀನುಗಾರರಿಗೆ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷ ದೇವದಾಸ್ ಬೋಳೂರು, ಸುಧಾಕರ್ ಕುಂದನ್ ಮತ್ತಿತರರು ಪಾಲ್ಗೊಂಡಿದ್ದರು.

Facebook Comments