ಲಂಕಾ ನೌಕಾದಳ ದಾಳಿ : ನಾಲ್ವರು ಭಾರತೀಯ ಮೀನುಗಾರರ ಸಾವು
ಚೆನ್ನೈ, ಜ.22- ಎಂದಿನಂತೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಹೋಗಿದ್ದ ನಮ್ಮ ಸಮುದಾಯದ ಮೀನುಗಾರರ ಮೇಲೆ ಶ್ರೀಲಂಕಾ ನೌಕಾ ದಳ ದಾಳಿ ನಡೆಸಿದ ಕಾರಣ ನಾಲ್ವರು ಸಾವನ್ನಪ್ಪಿದ್ದಾರೆ ಎಂಬ ಮೀನುಗಾರರ ಮಾಹಿತಿ ಉಲ್ಲೇಖಿಸಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಶ್ರೀಲಂಕಾ ನೌಕಾಪಡೆ ಕ್ರಮವನ್ನು ಖಂಡಿಸಿದ್ದಾರೆ. ದ್ವೀಪ ರಾಷ್ಟ್ರದ ಕಡಲ ದಳ ನಡೆಸಿರುವ ಕೃತ್ಯವನ್ನು ವಿರೋಧಿಸಿ, ಜೀವನೋಪಾಯಕ್ಕಾಗಿ ಮೀನು ಹಿಡಿಯಲು ಸಮುದ್ರಕ್ಕಿಳಿದಿದ್ದ ನಮ್ಮ ಮೀನುಗಾರರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಇದರಿಂದ ಅಮಾಯಕ ನಾಲ್ವರು ಮೀನುಗಾರರು ಮಾತ್ರವಲ್ಲ ಸಾವನ್ನಪ್ಪಿಲ್ಲ. ಅವರನ್ನು ಅವಲಂಬಿಸಿರುವ ಕುಟುಂಬವನ್ನು ನಾಶಗೆಡವಿದ್ದಾರೆ ಎನ್ನಬಹುದು ಎಂದಿದ್ದಾರೆ.
ಸಮುದ್ರದ ಮಧ್ಯದಲ್ಲಿ ನಡೆಯುವ ಇಂತಹ ಘಟನೆಗಳಿಗೆ ಅಂತ್ಯ ಹಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಶ್ರೀಲಂಕಾ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಈ ವಿಷಯದಲ್ಲಿ ಸಂಪರ್ಕದಲ್ಲಿದೆ ಎಂದರು. ಈ ಘಟನೆ ಬಗ್ಗೆ ಕೊಲಂಬೋದ ಭಾರತೀಯ ದೂತವಾಸದ ಹೈಕಮೀಷನರ್ ಮೂಲಕ ಸೂಕ್ತ ತನಿಖೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ನೌಕಾಪಡೆಯ ಹಡಗಿನೊಂದಿಗಿನ ಘರ್ಷಣೆಯಾದ ಮೂರು ದಿನಗಳ ನಂತರ ಭಾರತೀಯ ಮೀನುಗಾರಿಕಾ ದೋಣಿ ಮುಳುಗಿದೆ ಎಂದು ಶ್ರೀಲಂಕಾ ವರದಿ ನೀಡಿದೆ. ಸಿಎಂ ಪಳನಿಸ್ವಾಮಿ ಮೃತ ಮೀನುಗಾರರ ಕುಟುಂಬಗಳಿಗೆ ಸಾಂತ್ವನ ಹೇಳಿ, ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.