ಸೊಮಾಲಿಯಾ : ಸ್ಪೋಟಕ್ಕೆ ಐವರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಮೊಗದಿಶು, ನ.25- ಸೊಮಾಲಿಯಾದ ರಾಜಧಾನಿಯ ಜನನಿಬಿಡ ಪ್ರದೇಶದಲ್ಲಿ ಇಂದು ಬೆಳಗಿನ ದಟ್ಟಣೆಯ ಅವಧಿಯಲ್ಲಿ ಭಾರಿ ಸೋಟ ಸಂಭವಿಸಿದ್ದು, ಕನಿಷ್ಠ ಪಕ್ಷ ಐವರು ಮೃತರಾಗಿ ಇತರ ಹಲವರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಉಗ್ರಗಾಮಿ ಸಂಘಟನೆ ಅಲ್-ಶಹಾಬ್ ಘಟನೆಯ ಹೊಣೆ ಹೊತ್ತಿದೆ. ಮೊಗದಿಶು ನಗರದ ಮೇಲೆ ದಟ್ಟ ಹೊಗೆಯೆದ್ದಿರುವುದು ಇಂದು ಬೆಳಗ್ಗೆ ಕಂಡು ಬಂದಿತು.

ಅಮೀನ್ ಆಂಬ್ಯುಲೆನ್ಸ್ ಸರ್ವೀಸ್‍ನ ಅಬ್ದುಲ್‍ಕಾದಿರ್ ಆದಾನ್ ಅವರು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆಗೆ ಐವರ ಮರಣವನ್ನು ಖಚಿತಪಡಿಸಿದ್ದಾರೆ ಮತ್ತು ಕನಿಷ್ಠ ಪಕ್ಷ 15 ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೋಟವು ಶಾಲೆಯೊಂದಕ್ಕೆ ನಿಕಟವಾಗಿ ಸಂಭವಿಸಿದೆ.

Facebook Comments