ಬ್ರೇಕಿಂಗ್: ಕಲ್ಯಾಣಿಯಲ್ಲಿ ಮುಳುಗಿ ಐವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಏ.27- ಪ್ರವಾಸಕ್ಕೆ ಬಂದಿದ್ದ ಐವರು ಮುಳುಗಿ ದಾಬಸ್‍ಪೇಟೆ ಸಮೀಪದ ಸಿದ್ದರಬೆಟ್ಟದ ತಪ್ಪಲಿನ ಕಲ್ಯಾಣಿಯಲ್ಲಿ ನಡೆದಿದೆ.
ಬೆಂಗಳೂರಿನ ಥಣೀಸಂದ್ರ ಸಮೀಪದ ಹೆಗಡೆನಗರ ನಿವಾಸಿಗಳಾದ ಮುನೀರ್ ಖಾನ್ (49) , ರೇಷ್ಮಾ (22), ಉಸ್ಮಾನ್ ಖಾನ್ (14) , ಯಾರಬ್ ಖಾನ್ (21) , ಮುಬೀನ್ ತಾಜ್ (21) ಎಂದು ಗುರುತಿಸಲಾಗಿದೆ.

ಸಿದ್ದರಬೆಟ್ಟದ ಬಳಿ ಇರುವ ಮಸೀದಿಗೆ ಇಂದು ಬೆಳಗ್ಗೆ ಪೂಜೆಗೆ ಬಂದಿದ್ದ ಅವರು ಅಲ್ಲಿನ ಸಮೀಪದ ಕಲ್ಯಾಣಿಯಲ್ಲಿ ಬಾಲಕ ಉಸ್ಮಾನ್ ಖಾನ್ ಕೈ ತೊಳೆಯಲು ಹೋದಾಗ ಅಲ್ಲಿ ಜಾರಿ ಬಿದ್ದಿದ್ದಾನೆ

ಇದನ್ನು ಕಂಡ ಉಳಿದವರು ಆತನನ್ನು ರಕ್ಷಿಸಲು ಒಬ್ಬರ ನಂತರ ಒಬ್ಬರು ಕಲ್ಯಾಣಿಯಲ್ಲಿ ಇಳಿದಾಗ ಎಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದಾಬಸ್‍ಪೇಟೆ ಪೊಲೀಸರು ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ