ಪಶ್ಚಿಮ ಬಂಗಾಳದ ಮೂವರು ಸೇರಿ 5 ಮಂದಿ ಸೆರೆ, 6 ಲಕ್ಷ ಮೌಲ್ಯದ ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.1- ಮಾದಕ ವಸ್ತು ನಿಗ್ರಹಕ್ಕೆ ಮುಂದಾಗಿರುವ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐದು ಮಂದಿಯನ್ನು ಬಂಧಿಸಿ 6.15 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬೇಗೂರು: ಮಾದಕ ವಸ್ತು ಗಾಂಜಾವನ್ನು ಯುವಜನತೆಗೆ, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೂವರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿ 4.40 ಲಕ್ಷ ರೂ. ಬೆಲೆಯ 11 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬೇಗೂರು 11ನೆ ಕ್ರಾಸ್ ನಿವಾಸಿಗಳಾದ ಮೊಹಮ್ಮದ್ ಆಲಂಗೀರ್ (44), ಮೊಹಮ್ಮದ್ ರಿಪುನ್ (33), ಮೋಹರ್ (23) ಬಂಧಿತರು. ಆರೋಪಿಗಳೆಲ್ಲರೂ ಮೂಲತಃ ಪಶ್ಚಿಮ ಬಂಗಾಳ ರಾಜ್ಯಕ್ಕೆ ಸೇರಿದವರಾಗಿದ್ದು, ಇವರು ಗಾಂಜಾವನ್ನು ಖರೀದಿಸಿ ರೈಲಿನ ಮೂಲಕ ಬೆಂಗಳೂರು ನಗರಕ್ಕೆ ತಂದು ವಿವಿಧ ಕಡೆ ಮಾರಾಟ ಮಾಡುತ್ತ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

ಆ.27ರಂದು ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಬೇಗೂರು ವ್ಯಾಪ್ತಿಯ ವಿಶ್ವಪ್ರಿಯ ಲೇಔಟ್‍ನಲ್ಲಿನ ದೇವಾಲಯದ ಹಿಂಭಾಗದ ಕಾಂಪೌಂಡ್ ಒಳಗೆ ಮಾದಕ ವಸ್ತು ಇಟ್ಟುಕೊಂಡು ಮರಾಟಕ್ಕೆ ಯತ್ನಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದೇವನಹಳ್ಳಿ: ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ದೇವನಹಳ್ಳಿ ಠಾಣೆ ಪೊಲೀಸರು ಹಾಗೂ ಬೆಂಗಳೂರು ನಗರ ಈಶಾನ್ಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ 3 ಕೆಜಿ, 5 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹೊಸಕೋಟೆಯ ಮುನಿರಾಜು (33) ಮತ್ತು ದೇವನಹಳ್ಳಿಯ ನಾಗೇಶ್ (25) ಬಂಧಿತರು.

ಆರೋಪಿಗಳಿಂದ 1.75 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ದೇವನಹಳ್ಳಿ-ಸೂಲಿಬೆಲೆ ರಸ್ತೆಯ ಏರ್‍ಲೈನ್ಸ್ ಡಾಬಾ ಬಳಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ದೇವನಹಳ್ಳಿ ಠಾಣೆ ಪೊಲೀಸರು ಮತ್ತು ಬೆಂಗಳೂರು ನಗರ ಈಶಾನ್ಯ ವಿಭಾಗದ ಪೆÇಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.

Facebook Comments