ಎಫ್‍ಕೆಸಿಸಿಐ ಅಧ್ಯಕ್ಷರಾಗಿ  ಜನಾರ್ಧನ್ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.2- ಎಫ್‍ಕೆಸಿಸಿಐ ಅಧ್ಯಕ್ಷರಾಗಿ ವಾಣಿಜ್ಯೋದ್ಯಮಿ ಸಿ.ಆರ್.ಜನಾರ್ದನ್ ಅವರು ಆಯ್ಕೆಯಾಗಿದ್ದಾರೆ. ಹಿರಿಯ ಉಪಾಧ್ಯಕ್ಷರಾಗಿ ಪೆರಿಕಲ್ ಎಂ. ಸುಂದರ್, ಉಪಾಧ್ಯಕ್ಷರಾಗಿ ಐ.ಎಸ್.ಪ್ರಸಾದ್ ಹಾಗೂ ಅಭಿಮಾನಿ ಸಮೂಹ ಸಂಸ್ಥೆಯ ಕಾರ್ಯ ಕಾರಿ ನಿರ್ದೇಶಕ ವಿ.ಶ್ರೀನಿವಾಸ್ ಅವರು ಎಫ್‍ಕೆಸಿಸಿಐನ ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ನಾಲ್ಕನೆ ಬಾರಿಗೆ ಚುನಾಯಿತರಾಗಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಸಿ.ಆರ್.ಜನಾರ್ದನ್ ಅವರು 1989ರಲ್ಲಿ ವೆಂಕಟೇಶ್ವರ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವ ಮೂಲಕ ಇಂದು ಬೃಹತ್ ಕೈಗಾರಿಕೋದ್ಯಮಿ ಆಗಿ ಗುರುತಿಸಿಕೊಂಡಿದ್ದಾರೆ.

ಕಾಸಿಯಾ ಅಧ್ಯಕ್ಷರಾಗಿಯೂ ಉತ್ತಮ ಸೇವೆ ಸಲ್ಲಿಸಿರುವ ಜನಾರ್ದನ್ ಅವರು ಅಖಿಲ ಭಾರತ ಮಾಸ್ಟರ್ ಪ್ರಿಂಟರ್ಸ್ ಫೆಡರೇಷನ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಂಸ್ಥೆಯನ್ನು ದೇಶದ ನಾಲ್ಕು ಮೂಲೆಗಳಿಗೂ ಹರಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

Facebook Comments