ಬೃಹತ್ ರಾಷ್ಟ್ರಧ್ವಜ ನಿರ್ಮಾಣಕ್ಕೆ ಮಹೇಂದ್ರ ಮುನ್ನೋತ್ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.9- ನೆಲಮಂಗಲದ ದೇವಾಂಗ ಸಮುದಾಯದ ವಸ್ತ್ರ ಭಾರತ ರಾಷ್ಟ್ರೀಯ ಚಿಂತನಾ ಸಂಸ್ಥೆಯವತಿಯಿಂದ ರಾಷ್ಟ್ರಪ್ರೇಮ ಮತ್ತು ರಾಷ್ಟ್ರ ಧ್ವಜದ ಮಹತ್ವವನ್ನು ಸಾರುವ ಉದ್ದೇಶದಿಂದ ಸ್ವಾತಂತ್ರ್ಯೋತ್ಸವದ ವಿಶೇಷವಾಗಿ ಬೃಹತ್ ರಾಷ್ಟ್ರಧ್ವಜವನ್ನು ಅರ್ಪಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಇದರ ಪೂರ್ವಭಾವಿಯಾಗಿ 60 ಅಡಿಗಳ ಅಗಲ ಮತ್ತು 90 ಅಡಿಗಳ ಉದ್ದವಿರುವ ರಾಷ್ಟ್ರಧ್ವಜವನ್ನು ಸಿದ್ಧಪಡಿಸಲಾಗುತ್ತಿದೆ. ವಿಜಯನಗರದ ಮಾರುತಿ ಮೆಡಿಕಲ್ಸïನ ಗೋ ಸೇವಕ ಮಹೇಂದ್ರ ಮುನೋತ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಉಮೇಶ್ ಕುಮಾರ್ ವೆಂಕಟರಾಮಯ್ಯ ಮತ್ತಿತರರು ಹಾಜರಿದ್ದರು. ಈ ವೇಳೆ ಮಾತನಾಡಿದ ಮಹೇಂದ್ರ ಮುನ್ನೋತ್ ರಾಷ್ಟ್ರಧ್ವಜ ನಮ್ಮ ತಾಯಿಯ ಸೆರಗಿನಂತೆ ಪರಮ ಪವಿತ್ರವಾದದ್ದು.

ರಾಷ್ಟ್ರಧ್ವಜಕ್ಕೆ ಅಪಮಾನವಾದರೆ ಅದು ನಮ್ಮ ತಾಯಿಗೆ ಕಳಂಕ ವಾದಂತೆ . ರಾಷ್ಟ್ರಧ್ವಜ ವೆಂಬುದು ಪ್ರತಿಯೊಬ್ಬ ಭಾರತೀಯನ ಆತ್ಮವಿದ್ದಂತೆ. ರಾಷ್ಟ್ರಪ್ರೇಮ, ದೇಶಭಕ್ತಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Facebook Comments

Sri Raghav

Admin