ವಿಮಾನ ಹಾರಾಟ ಆರಂಭ, ಮೊದಲ ದಿನವೇ ಭಾರಿ ಗೊಂದಲ, ಪ್ರಯಾಣಿಕರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 25- ಲಾಕ್‍ಡೌನ್ ಜಾರಿಯಾದ ಎರಡು ತಿಂಗಳ ಬಳಿಕ ಲೋಹದ ಹಕ್ಕಿಗಳು ಇಂದು ಹಾರಾಟ ಆರಂಭಿಸಿದರೂ ಮೊದಲ ದಿನವೇ ಬಾರೀ ಗೊಂದಲ ಉಂಟಾಗಿ ಪ್ರಯಾಣಿಕರು ಪರದಾಡಿದರಲ್ಲದೆ, ಅನೇಕ ವಿಮಾನಗಳು ಹಾರಾಟವೂ ಕೊನೆಕ್ಷಣದಲ್ಲಿ ರದ್ದಾಗಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೇಂದ್ರ ನಾಗರೀಕ ವಿಮಾನ ಯಾವ ಇಲಾಖೆಯ ಸೂಚನೆಯಂತೆ ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆಯೇ ಸ್ವದೇಶಿ ವಿಮಾನಗಳ ಹಾರಾಟ ಆರಂಭವಾಯಿತು. ಮೊದಲು ಚೆನ್ನೈನಿಂದ ಪ್ರಯಾಣಿಕರನ್ನು ಹೊತ್ತ ವಿಮಾನ ಸುರಕ್ಷಿತವಾಗಿ ಕೆಳಗಿಳಿಯಿತು.

ಎಲ್ಲ ವಿಮಾನ ನಿಲ್ದಾಣಗಳಲ್ಲೂ ಮೊದಲ ವಿಮಾನದಲ್ಲಿ ಅಲ್ಲಲ್ಲೇ ಸಿಲುಕಿದ್ದ ವಿದ್ಯಾರ್ಥಿಗಳು, ವಲಸಿಗರೇ ಪ್ರಯಾಣಿಕರು, ಬಹುತೇಕ ನಿಲ್ದಾಣಗಳಲ್ಲಿ ವಲಸಿಗರು, ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿತ್ತು.

ನಿಲ್ದಾಣಕ್ಕೆ ಬೆಳ್ಳಂಬೆಳಗ್ಗೆ ಮೊದಲ ವಿಮಾನಕ್ಕೆ ಹೊರಡಲು ಆಗಮಿಸಿದ ನೂರಾರು ಜನ ತಮ್ಮ ಸ್ವಂತ ಊರುಗಳಿಗೆ, ಉದ್ಯೋಗ ಸ್ಥಳಗಳಿಗೆ ತೆರಳುವುದಕ್ಕೆ ಕಾತರರಾಗಿದ್ದ ದೃಶ್ಯ ಕಂಡುಬಂತು. ಬಹುತೇಕ ಎರಡು ತಿಂಗಳ ನಂತರ ವಿಮಾನ ಯಾನ ಮತ್ತೆ ಶುರುವಾದ ಕಾರಣ ಎಲ್ಲರ ಮುಖದಲ್ಲೂ ಕಳವಳ ಕಾಣುತ್ತಿತ್ತು.

ವಿಮಾನ ಪ್ರಯಾಣಕ್ಕೆ ಹೊರಟವರ ಪೈಕಿ ಅರೆಸೇನಾ ಸಿಬ್ಬಂದಿ, ಸೇನಾ ಸಿಬ್ಬಂದಿ, ವಿದ್ಯಾರ್ಥಿಗಳು, ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇವರಲ್ಲಿ ಬಹುತೇಕರಿಗೆ ವಿಶೇಷ ರೈಲುಗಳ ಟಿಕೆಟ್ ಸಿಗದೆ ಇದ್ದ ಕಾರಣ ವಿಮಾನ ಯಾನಕ್ಕೆ ಮುಂದಾದವರು.

ನಂತರ ನಿಲ್ದಾಣದಲ್ಲಿ ಎಲ್ಲವೂ ಗೊಂದಲಮಯವಾಗಿತ್ತು. ಕೆಲವು ವಿಮಾನಗಳು ಬೆಂಗಳೂರಿನಿಂದ ಕಡೆಗಳಿಗೆಯಲ್ಲಿ ರದ್ದುಪಡಿಸಿರುವುದಾಗಿ ಘೋಷಣೆ ಮಾಡುತ್ತಿದ್ದಂತೆ ವಿವಿಧ ನಗರಗಳಿಗೆ ತೆರಳಲು ಬಂದಿದ್ದ ಸೀಮಿತ ಸಂಖ್ಯೆಯ ಪ್ರಯಾಣಿಕರು ಪರಡಾಡಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ದೇಶಿ ವಿಮಾನ ಸೇವೆ ಆರಂಭದ ಮೊದಲ ದಿನವೇ ಸಾಕಷ್ಟು ವಿಮಾನಗಳು ರದ್ದಾಗಿದ್ದು, ಕೊರೊನಾ ಸೋಂಕು ಹರಡುವ ಭಯ ಹಾಗೂ ಹಲವು ರಾಜ್ಯಗಳ ಗೊಂದಲದಿಂದ ಸಾಕಷ್ಟು ವಿಮಾನಗಳ ಹಾರಾಟವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.

ಚೆನ್ನೈ, ಮಂಗಳೂರು, ವಿಶಾಖಪಟ್ಟಣಂ, ತಿರುಪತಿ, ಕೋಲ್ಕತ್ತಾ, ಗೋವಾ, ಇಂದೋರ್ ಸೇರಿದಂತೆ ಒಟ್ಟು 32 ವಿಮಾನ ರದ್ದಾಗಿದೆ. ಪರಿಣಾಮ ತಮ್ಮ ತಮ್ಮ ವಾಸಸ್ಥಳಗಳಿಗೆ ತೆರಳಲು ಮುಂದಾಗಿದ್ದ ಪ್ರಯಾಣಿಕರು ಅಕಾರಿಗಳ ಜೊತೆ ವಾಗ್ವದಕ್ಕೆ ಇಳಿದರು.

ಎರಡು ತಿಂಗಳ ಬಳಿಕ ನಾವು ನಮ್ಮ ಮನೆಗೆ ಹೊರಡಲು ಸಿದ್ದತೆ ಮಾಡಿಕೊಂಡಿದ್ದೇವು. ಆದರೆ, ಕೊನೆ ಕ್ಷಣದಲ್ಲಿ ವಿಮಾನ ರದ್ದುಪಡಿಸಲಾಗಿದೆ ಎಂದು ಈಗ ಅಕಾರಿಗಳು ಹೇಳುತ್ತಿದ್ದಾರೆ.

ಮುಂಜಾನೆಯಿಂದ ಬಂದು ನಾವು ಕಾಯುತ್ತಿದ್ದೇವೆ. ಏಕಾಏಕಿ ವಿಮಾನ ರದ್ದುಪಡಿಸಲಾಗಿದೆ ಎಂದು ಹೇಳಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಅನೇಕ ಪ್ರಯಾಣಿಕರು ಗೋಳಾಡುತ್ತಿದ್ದ ದೃಶ್ಯ ಕಂಡು ಬಂತು.

ತೆಲಂಗಾಣ ಸರ್ಕಾರದಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಗೆ ಕೆಐಎಎಲ್ ನಿಂದ ತೆರಳಬೇಕಿದ್ದ ವಿಮಾನ ಕೊನೇ ಕ್ಷಣದಲ್ಲಿ ರದ್ದು ಪಡಿಸಲಾಯಿತು. ಏಕಾಏಕಿ ವಿಮಾನ ಹಾರಾಟವನ್ನು ರದ್ದು ಮಾಡಿದ ಕಾರಣ ಸಿಬ್ಬಂದಿಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಯಾಣಿಕರ ಅಲಭ್ಯತೆ ಮತ್ತು ತಾಂತ್ರಿಕ ಕಾರಣಗಳಿಂದ ಮಂಗಳೂರು ನಿಲ್ದಾಣದಿಂದ ಮುಂಬೈ ಮತ್ತು ಚೆನ್ನೈಗೆ ವಿಮಾನ ಹಾರಾಟ ರದ್ದಾಗಿದೆ. ಹಗಲು ಹೊತ್ತಿನಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ವಿಮಾನ ಹಾರಾಟವಿಲ್ಲ. ರಾತ್ರಿ 7.35ಕ್ಕೆ ಬೆಂಗಳೂರಿಗೆ ಇಂಡಿಗೋ ವಿಮಾನ ತೆರಳಲಿದೆ.

ರಾತ್ರಿ 9.50ಕ್ಕೆ ಬೆಂಗಳೂರಿಗೆ ಮತ್ತೊಂದು ಸ್ಪೈಸ್ ಜೆಟ್ ವಿಮಾನ ಪ್ರಯಾಣಿಸಲಿದೆ. ಇಂದು ನಿಗದಿಯಾಗಿದ್ದ 6 ವಿಮಾನಗಳ ಪೈಕಿ ನಾಲ್ಕು ವಿಮಾನ ಹಾರಾಟ ರದ್ದಾಗಿದೆ. ಇಂದು ಕೇವಲ ಬೆಂಗಳೂರು ಮಧ್ಯೆ 2 ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ.

ಹಾರುವ ಮೊದಲೇ ಮೈಸೂರಿಗೆ ಆಗಮಿಸಬೇಕಿದ್ದ ಬೆಳಗಾವಿ ವಿಮಾನ ರದ್ದಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಿಂದ ವಿಮಾನ ಹೊರಟು, ಸಂಜೆ 4.20ಕ್ಕೆ ಮೈಸೂರಿಗೆ ತಲುಪಬೇಕಿತ್ತು.

ಮತ್ತೆ ಮೈಸೂರಿನಿಂದ ಬೆಳಗಾವಿಗೆ ಹಾರಾಟ ಮಾಡಬೇಕಿತ್ತು. ನಿಗದಿತ ಪ್ರಯಾಣಿಕರ ಸಂಖ್ಯೆಗಿಂತ ಕಡಿಮೆಯಾದ ಹಿನ್ನೆಲೆಯಲ್ಲಿ ವಿಮಾನ ಹಾರಟ ರದ್ದು ಮಾಡಿರುವುದಾಗಿ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಯಾವುದೇ ಮುನ್ಸೂಚನೆ ನೀಡದೆ ದೆಹಲಿಯಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ 80 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ವಿಮಾನ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ನಿಂದ ಸುಮಾರು 2 ತಿಂಗಳು ಸ್ಥಗಿತವಾಗಿದ್ದ ದೇಶೀಯ ವಿಮಾನ ಸಂಚಾರ ಇಂದಿನಿಂದ ಆರಂಭವಾಗಿದೆ. ಆದ್ರೆ ವಿಮಾನಯಾನ ಆರಂಭದ ಮೊದಲ ದಿನವೇ ಸಾಕಷ್ಟು ವಿಮಾನಗಳ ಸಂಚಾರ ರದ್ದಾಗಿದೆ.ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳ ಹಾರಾಟ ರದ್ದಾಗಿದೆ.

ಕಟ್ಟುನಿಟ್ಟಿನ ನಿಯಮ ಜಾರಿ:
ಚೆನ್ನೈ, ದೆಹಲಿ, ಕೊಚ್ಚಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದ ವಿಮಾನಗಳಿಂದ ಈವರೆಗೆ ಒಟ್ಟು 240 ಪ್ರಯಾಣಿಕರು ಆಗಮಿಸಿದ್ದಾರೆ. ಪ್ರಯಾಣಿಕರ ಕೈ ಮೇಲೆ ಜಿ ಮತ್ತು ಆರ್ ಚಿಹ್ನೆಯ ಸೀಲ್ ಹಾಕಲಾಗಿದ್ದು, ರೆಡ್ ಝೋನ್‍ನಿಂದ ಬಂದವರಿಗೆ ಆರ್ ಗುರುತು, ಗ್ರೀನ್ ಝೊನ್ ಜಿಲ್ಲೆಗಳಿಂದ ಬಂದವರಿಗೆ ಜಿ ಗುರುತು ಹಾಕಲಾಗುತ್ತಿದೆ.

ಹೈ ರಿಸ್ಕ್ ಝೋನ್‍ನಿಂದ ಬಂದವರಿಗೆ ಹೆಚ್ಚಿನ ತಪಾಸಣೆ ಮಾಡಲಾಯಿತು.
ವಿಮಾನಗಳ ಕಾರ್ಯಾರಂಭಕ್ಕೂ ಮುನ್ನ ಸರ್ಕಾರ ಮತ್ತೊಮ್ಮೆ ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೊರೊನಾ ರೋಗಲಕ್ಷಣಗಳು ಇಲ್ಲದವರು ಮಾತ್ರ ವಿಮಾನಗಳಲ್ಲಿ ಪ್ರಯಾಣ ಮಾಡಬಹುದಾಗಿದೆ.

ಒಂದು ವೇಳೆ ಪ್ರಯಾಣದ ನಂತರ ರೋಗ ಲಕ್ಷಣಗಳು ಕಾಣಿಸಿಕೊಂಡರೆ ಜಿಲ್ಲಾ ಮಟ್ಟದ ಅಕಾರಿಗಳಿಗೆ ತಮ್ಮ ಪ್ರಯಾಣದ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಸೂಚಿಸಿದೆ.

ಇನ್ನು ವಿದೇಶದಿಂದ ಭಾರತಕ್ಕೆ ವಿಮಾನದಲ್ಲಿ ಬರುವವರಿಗೂ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರಯಾಣದ ನಂತರ, ಕಡ್ಡಾಯವಾಗಿ 14 ದಿನಗಳ ಕಾಲ ತಮ್ಮದೇ ಖರ್ಚಿನಲ್ಲಿ ಕ್ವಾರಂಟೈನ್, ನಂತರ 7 ದಿನಗಳ ಕಾಲ ಮನೆಯಲ್ಲಿಯೇ ಐಸೊಲೇಷನ್ ನಲ್ಲಿರುತ್ತೇವೆ ಎಂಬ ನಿಯಮಗಳಿಗೆ ಬದ್ಧರಾಗಿರುತ್ತೇವೆ ಎಂದು ಭಾರತಕ್ಕೆ ತೆರಳುವ ವಿಮಾನ ಹತ್ತುವ ಮುನ್ನ ಸಹಿ ಮಾಡಬೇಕಾಗುತ್ತದೆ.

ಪ್ರಮುಖವಾಗಿ 7 ರಾಜ್ಯಗಳಿಂದ ಕರ್ನಾಟಕಕ್ಕೆ ವಿಮಾನದಲ್ಲಿ ಬರುವವರು 1 ವಾರಗಳ ಕಾಲ ಕ್ವಾರಂಟೈನ್ನಲ್ಲಿರಬೇಕಾದ್ದು ಕಡ್ಡಾಯ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್ ಮುಂತಾದ ಅತಿಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ಇರುವ ರಾಜ್ಯಗಳಿಂದ ಆಗಮಿಸುವವರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

ಹಾಗೇ, ಕರ್ನಾಟಕದ ವಿಮಾನ ನಿಲ್ದಾಣಗಳಿಗೆ ಬಂದಿಳಿಯುವ ಪ್ರಯಾಣಿಕರು ಬಳಸುವ ಟ್ಯಾಕ್ಸಿಗಳನ್ನು ಕೂಡ ಸಂಪೂರ್ಣ ನಿಟೈಸರ್‍ಗೊಳಿಸಲಾಗುವುದು. ಟ್ಯಾಕ್ಸಿಗಳಲ್ಲಿ ಸಂಚರಿಸುವ ಟ್ರೈವರ್ ಮತ್ತು ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ. ಅಲ್ಲದೆ, ಕರ್ನಾಟಕದ ಏರ್ ಪೋರ್ಟ್ ಗಳಿಂದ ಟ್ಯಾಕ್ಸಿ, ಕ್ಯಾಬ್ ಸೇವೆ ಒದಗಿಸುವವರು ಕೂಡ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲೇಬೇಕು.

Facebook Comments

Sri Raghav

Admin