ಪೈಲೆಟ್‍ಗಳ ಮುಷ್ಕರ : ಬ್ರಿಟಿಷ್ ಏರ್‌ವೇಸ್‌ ಎಲ್ಲ ವಿಮಾನಗಳ ಹಾರಾಟ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್,ಸೆ.9- ತಮ್ಮ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರಸಿದ್ದ ವಿಮಾನಯಾನ ಸಂಸ್ಥೆ ಬ್ರಿಟಿಷ್ ಏರ್‌ವೇಸ್‌(ಬಿಎ)ನ ಪೈಲೆಟ್‍ಗಳು ಇಂದಿನಿಂದ ಮುಷ್ಕರದ ಹಾದಿ ಹಿಡಿದಿದ್ದಾರೆ.

ಇದರಿಂದ ಈ ಸಂಸ್ಥೆಯ ಬಹುತೇಕ ಎಲ್ಲ ವಿಮಾನ ಹಾರಾಟಗಳು ರದ್ದಾಗಿವೆ. ಪೈಲೆಟ್‍ಗಳ ಮುಷ್ಕರದಿಂದ ಲಂಡನ್ ಸೇರಿದಂತೆ ದೇಶದ ಪ್ರಮುಖ ನಗರಗಳ ಎಲ್ಲ  ಏರ್ ಪೋರ್ಟ್ ಗಳಲ್ಲಿ ಬಿಎ ವಿಮಾನಗಳು ಸ್ಥಗಿತಗೊಂಡಿವೆ.

ಇದರಿಂದ ಸಹಸ್ರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.ಬ್ರಿಟಿಸ್ ಏರ್‌ವೇಸ್‌ ಪೈಲೆಟ್‍ಗಳ ಮುಷ್ಕರದಿಂದಾಗಿ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳ ಪ್ರಯಾಣಿಕರಿಗೂ ಬಿಸಿ ತಟ್ಟಿದೆ.  ತಮ್ಮ ವೇತನ ಪರಿಷ್ಕರಿಸುವಂತೆ ಹಲವು ತಿಂಗಳಿನಿಂದಲೂ ಸಂಸ್ಥೆ ಮತ್ತು ಸ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೆವು. ಆದರೆ ನಮ್ಮ ಮನವಿಗೆ ಯಾವ ಸ್ಪಂದೆನಯೂ ದೊರೆತಿಲ್ಲ.

ಹೀಗಾಗಿ ನಾವು ಅನ್ಯ ಮಾರ್ಗವಿಲ್ಲದೆ ಮುಷ್ಕರದ ಹಾದಿ ಅನಿವಾರ್ಯವಾಗಿದೆ ಎಂದು ಬ್ರಿಟಿಷ್ ಏರ್‌ವೇಸ್‌ ಪೈಲೆಟ್‍ಗಳ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಮುಷ್ಕರ ನಿರತ ಪೈಲೆಟ್‍ಗಳೊಂದಿಗೆ ಸಂಸ್ಥೆ ಮತ್ತು ಸರ್ಕಾರದ ಪ್ರತಿನಿಧಿಗಳು ಮಾತುಕತೆ ನಡೆಸುತ್ತಿದ್ದಾರೆ.

Facebook Comments