Friday, April 26, 2024
Homeರಾಷ್ಟ್ರೀಯಜ.6 ರಿಂದ ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾರಂಭ

ಜ.6 ರಿಂದ ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾರಂಭ

ನವದೆಹಲಿ,ಡಿ.23-ಶ್ರೀರಾಮನ ಜನ್ಮ ಸ್ಥಾನ ಅಯೋಧ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಿಗೆ ಜ.6 ರಿಂದ ವಿಮಾನ ಹಾರಾಟ ಆರಂಭವಾಗಲಿದ್ದು, ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

ಅಯೋಧ್ಯೆ ವಿಮಾನ ನಿಲ್ದಾಣನಲ್ಲಿ ಡಿ.22 ರಂದು ಭಾರತೀಯ ವಾಯುಪಡೆಯ ಏರ್‍ಬಸ್ ಎ320 ಅನ್ನು ಇತ್ತೀಚೆಗೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದು, ಮುಂದಿನ ವರ್ಷ ರಾಮ ಮಂದಿರದ ಭವ್ಯ ಉದ್ಘಾಟನೆಗೆ ಮುಂಚಿತವಾಗಿ ವಿಮಾನ ಪ್ರಯಾಣದ ಕೇಂದ್ರವಾಗಲು ಸಜ್ಜಾಗುತ್ತಿರುವಂತೆ ಅಯೋಧ್ಯಾ ಹೊಸ ಯುಗಕ್ಕೆ ನಾಂದಿ ಹಾಡಿದೆ.

ಏರ್‍ಲೈನ್ಸ್ ಕಂಪನಿ ಇಂಡಿಗೋ ದೆಹಲಿ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಗೋವಾದಂತಹ ಪ್ರಮುಖ ನಗರಗಳಿಗೆ ವಿಮಾನಗಳನ್ನು ಒದಗಿಸಲಿದೆ. ಅಯೋಧ್ಯೆಯಲ್ಲಿ ಏರ್‍ಸ್ಟ್ರಿಪ್ ತುಂಬಾ ಚಿಕ್ಕದಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ, ನಮಗೆ ಇಲ್ಲಿ ಕೇವಲ 178 ಎಕರೆ ಭೂಮಿ ಇತ್ತು, ಇಷ್ಟು ಚಿಕ್ಕ ಪಟ್ಟಿಯಲ್ಲಿ ನಮಗೆ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಗೆ ತಿಳಿಸಲಾಗಿತ್ತು.

ರಾಜ್ಯ ಸರ್ಕಾರದಿಂದ 821 ಎಕರೆ ಭೂಮಿಯನ್ನು ಒದಗಿಸಿದ ನಂತರ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹೊಸ ವಿಮಾನ ನಿಲ್ದಾಣವನ್ನು ಯುದ್ಧದ ಆಧಾರದ ಮೇಲೆ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ಹೊಸ ವಿಮಾನ ನಿಲ್ದಾಣವು ಡಿಸೆಂಬರ್ 15 ರೊಳಗೆ ಸಿದ್ಧವಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.

24 ಗಂಟೆಯಲ್ಲಿ 752 ಹೊಸ ಕೋವಿಡ್ ಪ್ರಕರಣಗಳು, 4 ಸಾವು

ಅಯೋಧ್ಯೆಯ ವಿಮಾನ ನಿಲ್ದಾಣವು ನಗರದ ಐತಿಹಾಸಿಕ ಮಹತ್ವ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ದೇಶ ಅಥವಾ ವಿದೇಶದಿಂದ ಯಾರಾದರೂ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದಾಗ ಅವರು ನಗರದ ಐತಿಹಾಸಿಕ ಮಹತ್ವದ ನೋಟವನ್ನು ಪಡೆಯಬೇಕು. ಆದ್ದರಿಂದ ಅಯೋಧ್ಯೆಯ ವಿಮಾನ ನಿಲ್ದಾಣವು ಮತ್ತೊಂದು ವಿಮಾನ ನಿಲ್ದಾಣವಾಗಬಾರದು. ನಾವು ಅಯೋಧ್ಯೆಯ ಸಂಸ್ಕøತಿಯನ್ನು ಅದರ ವಿಮಾನ ನಿಲ್ದಾಣದಲ್ಲಿ ಅಳವಡಿಸಲು ಪ್ರಯತ್ನಿಸಿದ್ದೇವೆ ಎಂದು ಸಿಂಧಿಯಾ ಹೇಳಿದರು.

6500 ಚದರ ಮೀಟರ್ ವಿಮಾನ ನಿಲ್ದಾಣವು ಒಂದು ಗಂಟೆಯಲ್ಲಿ ಎರಡರಿಂದ ಮೂರು ವಿಮಾನಗಳನ್ನು ಇಳಿಸಬಹುದು. 2200 ಮೀಟರ್ ರನ್‍ವೇಯನ್ನು ಎರಡನೇ ಹಂತದಲ್ಲಿ 3700 ಮೀಟರ್‍ಗೆ ವಿಸ್ತರಿಸಲಾಗುವುದು. ಇದು ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳು ಅಯೋಧ್ಯೆಗೆ ಇಳಿಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

RELATED ARTICLES

Latest News