ಮೈಸೂರು-ಊಟಿ ರಸ್ತೆಯಲ್ಲಿ ಪ್ರವಾಹ, ವಾಹನ ಸವಾರರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಆ.8- ಕಪಿಲಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೇರಳದ ವೈನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯದಿಂದ 75 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ.

ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯಲ್ಲಿನ ನಂಜನಗೂಡು ಸಮೀಪದ ಮಲ್ಲಿನಮೂಲೆ ಮಠದ ಬಳಿ ನೀರು ಹರಿಯುತ್ತಿರುವುದರಿಂದ ವಾಹನ ಸವಾರರಿಗೂ ತೀವ್ರ ತೊಂದರೆ ಉಂಟಾಗಿದೆ.

ವಾಹನ ಚಲಾಯಿಸುವವರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಮಲ್ಲಿನ ಮೂಲೆ ಮಠದ ಬಳಿ ಬಸವೇಶ್ವರ ದೇವಾಲಯದ ಜಲಾವೃತ ವಾಗಿದೆ. ಮೈಸೂರು-ಸುತ್ತೂರು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ ಸುತ್ತೂರಿಗೆ ಬೇರೆ ಮಾರ್ಗವಾಗಿ ಸಾಗಬೇಕಾಗಿದೆ.

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಮುಡಿಕಟ್ಟೆ ಅರ್ಧ ಭಾಗ, ಸೇತುವೆ, ಸೊಪಾನಕಟ್ಟೆ ನೀರಿನಲ್ಲಿ ಮುಳುಗಡೆಯಾಗಿದೆ.

Facebook Comments

Sri Raghav

Admin