ದೇಶದ 1,232 ಗ್ರಾಮಗಳಲ್ಲಿ ಜಲ ಪ್ರಳಯ, ನೆಲೆ ಕಳೆದುಕೊಂಡ 1.25 ಕೋಟಿಗೂ ಹೆಚ್ಚು ಮಂದಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.10-ದೇಶದ ಹಲವೆಡೆ ಮುಂಗಾರು ಋತುವಿನ ವರುಣಾರ್ಭಟ ಉಗ್ರ ಸ್ವರೂಪದಲ್ಲೇ ಮುಂದುವರೆದಿದ್ದು, 16 ಜಿಲ್ಲೆಗಳ 125 ತಾಲೂಕುಗಳ 1,232 ಗ್ರಾಮಗಳು ಪ್ರಕೃತಿ ವಿಕೋಪದಿಂದ ತತ್ತರಿಸಿವೆ.

ಮುಂಗಾರು ಮಳೆಗಾಲ ಆರಂಭವಿಂದ ಹಿಡಿದು ಇಂದು ಬೆಳಗ್ಗೆವರೆಗೆ ದೇಶದ ವಿವಿಧೆಡೆ ಭಾರೀ ಮಳೆ, ಪ್ರವಾಹ, ಗುಡ್ಡ ಕುಸಿತ, ಭೂಕುಸಿತಗಳಿಂದ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿದ್ದಾರೆ.

ಮಳೆ ಮತ್ತು ನೆರೆ ಹಾವಳಿಯಿಂದಾಗಿ 1.20 ಕೋಟಿಗೂ ಹೆಚ್ಚು ಜನರು ಸಂತ್ರಸ್ಥರಾಗಿದ್ದಾರೆ. ಬಿಹಾರ ರಾಜ್ಯವೊಂದರಲ್ಲೇ ಈವರೆಗೆ 130ಕ್ಕೂ ಮಂದಿ ಮೃತಪಟ್ಟು, ಸುಮಾರು 75,000 ಮಂದಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಪ್ರಕೃತಿ ವಿಕೋಪದಲ್ಲಿ ಅನೇಕರು ಕಣ್ಮರೆಯಾಗಿದ್ದು, ಕೋಟ್ಯಂತರ ರೂ.ಗಳಷ್ಟು ಆಸ್ತಿಪಾಸ್ತಿ ಮತ್ತು ಬೆಳೆ ನಷ್ಟ ಸಂಭವಿಸಿದೆ.

ಮುಂಗಾರು ಮಳೆ ದೇಶದ 16 ರಾಜ್ಯಗಳಲ್ಲಿ ಜಲಪ್ರಳಯ ಸ್ಥಿತಿಗೆ ಕಾರಣವಾಗಿದ್ದು, ಅನೇಕ ನದಿಗಳು, ಉಪ ನದಿಗಳು ಮತ್ತು ಜಲಾಶಯಗಳು ಭರ್ತಿಯಾಗಿ ಅಪಾಯ ಮಟ್ಟದಲ್ಲಿ ಭೋರ್ಗರೆಯುತ್ತಿದೆ.

ಬಿಹರ, ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್, ಅರುಣಾಚಲ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಈವರೆಗೆ 900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಕೃತ ಅಂಕಿ ಅಂಶಗಳು ಹೇಳಿವೆ.

ಈ ರಾಜ್ಯಗಳಲ್ಲಿ ಈವರೆಗೆ 1.25 ಕೋಟಿಗೂ ಹೆಚ್ಚು ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆ, ಬೀಕರ ಪ್ರವಾಹ ಮತ್ತು ಭೂಕುಸಿತಗಳಿಗೆ ಅಸ್ತಿಪಾಸ್ತಿಗಳು ಮತ್ತು ಲಕ್ಷಾಂತರ ಹೆಕ್ಟೇರ್‍ಗಳಷ್ಟು ಕೃಷಿ ಬೆಳೆಗಳಿಗೆ ಹಾನಿಯಾಗಿವೆ.

ದೇಶದ ಇನ್ನೂ ಕೆಲವು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಬಾರೀ ಮಳೆಯಾಗುವ ಬಗ್ಗೆ ಬಾರತೀಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ದೇಶದ ಇನ್ನೂ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು ಪರಿಸ್ಥಿತಿ ನಿಭಾಯಿಸಲು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ತಂಡಗಳು ಸಜ್ಜಾಗಿವೆ.

Facebook Comments

Sri Raghav

Admin