ನೆರೆಪರಿಹಾರದ ಮೊತ್ತ ಪರಿಷ್ಕರಿಸಿ ಸರ್ಕಾರ ಆದೇಶ, ಯಾರಿಗೆ ಎಷ್ಟು ಸಿಗುತ್ತೆ ಪರಿಹಾರ..? ಇಲ್ಲಿದೆ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.8-ರಾಜ್ಯದ ನಾನಾ ಕಡೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆ ಹಾಗೂ ಇತರೆ ವಸ್ತುಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಸರ್ಕಾರ ಪರಿಷ್ಕರಿಸಿ ಅಸೂಚನೆ ಹೊರಡಿಸಿದೆ.

ಪ್ರಕೃತಿ ವಿಕೋಪದಿಂದ ಮನೆ ಹಾನಿಗೊಳಗಾಗಿ ಬಟ್ಟೆಬರೆ, ದಿನಬಳಕೆ ವಸ್ತುಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳು ಹಾನಿಯಾದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಕುಟುಂಬಕ್ಕೆ 3,800 ರೂ. ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 6200 ಸೇರಿ ಒಟ್ಟು 10 ಸಾವಿರ ಪರಿಹಾರ ನೀಡಲಿದೆ. ಇನ್ನು ಮಳೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗಿದೆ.

ನೂತನ ಮಾರ್ಗಸೂಚಿ ಪ್ರಕಾರ ಎ ವರ್ಗದಲ್ಲಿನ ಶೇ.75ಕ್ಕಿಂತ ಹೆಚ್ಚು ಮನೆ ಹಾನಿಯಾಗಿದ್ದರೆ ಹೊಸದಾಗಿ ಮನೆ ನಿರ್ಮಿಸಲು 95,100 ರೂ.ಗಳ ಜೊತೆಗೆ 5 ಲಕ್ಷ, ಬಿ ವರ್ಗದಲ್ಲಿ ಶೇ.25ರಿಂದ 75ರಷ್ಟು ಭಾಗಶಃ ಮನೆ ಹಾಳಾಗಿದ್ದರೆ 5 ಲಕ್ಷ, ಶೇ.25ರಿಂದ 75ರಷ್ಟು ಭಾಗಶಃ ಮನೆ ಹಾನಿ ದುರಸ್ತಿಗೆ ಬಿ ವರ್ಗದಡಿ 95,100 ರೂ.ಗಳ ಜೊತೆಗೆ 3 ಲಕ್ಷ ಹಾಗೂ ಶೇ. 15ರಿಂದ 20ರಷ್ಟು ಅಲ್ಪಸ್ವಲ್ಪ ಮನೆ ಹಾನಿಯಾಗಿದ್ದರೆ 5,200 ಜೊತೆಗೆ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ನೀಡಲಿದೆ.

ಕೇಂದ್ರ ಸರ್ಕಾರದ ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ಮಾರ್ಗಸೂಚಿ ನಿಗದಿಪಡಿಸಿರುವ ದರಕ್ಕಿಂತ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡಲಿದೆ.ಪರಿಹಾರದ ಮೊತ್ತವನ್ನು ನೀಡುವಾಗ ಜಿಲ್ಲಾಕಾರಿಗಳು ಕೆಲವು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸರ್ಕಾರ ಸೂಚನೆ ಕೊಟ್ಟಿದೆ.

ಪರಿಹಾರದ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾಯಿಸಬೇಕು. ಜೊತೆಗೆ ವೆಚ್ಚದ ಜೊತೆಗೆ ಕುಟುಂಬವಾರು ಲೆಕ್ಕವನ್ನು ಕಡ್ಡಾಯವಾಗಿ ನಿರ್ವಹಿಸಿ, ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಸಂತ್ರಸ್ತರಿಗೆ ರಾಜೀವ್ ಗಾಂ ವಸತಿ ನಿಗಮ ವತಿಯಿಂದ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನದ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಮಳೆಹಾನಿ ಮಾಹಿತಿಯನ್ನು ವಸತಿ ಇಲಾಖೆಯಿಂದ ಹೊರಡಿಸಲಾಗುವ ಮಾರ್ಗಸೂಚಿ ಅನ್ವಯ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಸೂಚಿಸಿದೆ.

Facebook Comments

Sri Raghav

Admin