ಪ್ರವಾಹ ಪರಿಹಾರಕ್ಕೆ ಹಣದ ಕೊರತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.29- ರಾಜ್ಯದ ಹಲವೆಡೆ ಮಳೆಯ ರೌದ್ರಾವತಾರ ಹೆಚ್ಚಾಗಿದ್ದು, ನೆರೆ ಪರಿಸ್ಥಿತಿ ಉಂಟಾಗಿ ಅಪಾರ ಹಾನಿ ಸಂಭವಿಸಿದೆ. ಎಸ್‍ಡಿಆರ್‍ಎಫ್‍ನ ಬಹುತೇಕ ಹಣ ಕೋವಿಡ್ ನಿಯಂತ್ರಣಕ್ಕೆ ಬಳಸಿಕೊಂಡಿರುವ ರಾಜ್ಯ ಸರ್ಕಾರಕ್ಕೆ ನೆರೆ ಪರಿಹಾರಕ್ಕಾಗಿ ಉಳಿದಿರುವುದು ಅಲ್ಪ ಹಣ ಮಾತ್ರ. ಕರುನಾಡು ಕೊರೊನಾ ಎರಡನೇ ಅಲೆಗೆ ಸಂಪೂರ್ಣ ತತ್ತರಿಸಿ ಹೋಗಿದೆ. ಇದರ ನಿರ್ವಹಣೆ ಸದ್ಯ ಸರ್ಕಾರದ ಮುಂದಿರುವ ಆದ್ಯತೆ. ಇದರ ಮಧ್ಯೆ ರಾಜ್ಯದಲ್ಲಿ ಮಳೆ ತನ್ನ ಆರಂಭಿಕ ಆರ್ಭಟವನ್ನು ಪ್ರದರ್ಶಿಸಿದೆ.

11 ಜಿಲ್ಲೆಗಳ 45 ತಾಲೂಕು ಗಳಲ್ಲಿ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಮಳೆ ಹಾನಿ ಪ್ರಮಾಣದ ಪರಿಶೀಲನೆ ಪ್ರಗತಿಯಲ್ಲಿದೆ. ಪ್ರಾಥಮಿಕವಾಗಿ ಸುಮಾರು 15 ಸಾವಿರ ಕೋಟಿ ರೂ.ಗೂ ಅಧಿಕ ನೆರೆ ಹಾನಿ ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ. ರಾಜ್ಯಕ್ಕೆ ತೌಕ್ತೆ ಚಂಡಮಾರುತ ಅಪ್ಪಳಿಸಿ, ಭಾರೀ ನಷ್ಟ ಉಂಟು ಮಾಡಿದೆ. ಕರಾವಳಿ ಭಾಗದಲ್ಲಿ ಚಂಡ ಮಾರುತದಿಂದ ಅಪಾರ ಹಾನಿಯಾಗಿತ್ತು.

ಕರಾವಳಿ ಕರ್ನಾಟಕ ಭಾಗಕ್ಕೆ ಅಪ್ಪಳಿಸಿದ ತೌಕ್ತೆ ಚಂಡಮಾರುತದಿಂದ ಬರೋಬ್ಬರಿ 209 ಕೋಟಿ ರೂ. ಅಂದಾಜು ನಷ್ಟ ಉಂಟಾಗಿದೆ. ಒಂದೆಡೆ ಕೋವಿಡ್ ನಿರ್ವಹಣೆ ಮತ್ತೊಂದೆಡೆ ನೆರೆ ಪರಿಹಾರ ಕಾರ್ಯಕ್ಕೆ ಸರ್ಕಾರಕ್ಕೆ ಹಣ ಹೊಂದಿಸುವ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಬಹುತೇಕ ಎಸ್‍ಡಿಆರ್‍ಎಫ್ ಹಣ ಕೋವಿಡ್ ನಿರ್ವಹಣೆಗೆ ಬಳಸಲಾಗುತ್ತಿದೆ. ಈ ಮಧ್ಯೆ ನೆರೆ ವಿಪತ್ತು ಎದುರಾಗಿದ್ದು, ಸೀಮಿತ ಹಣದಿಂದ ಸಂಪೂರ್ಣ ನೆರೆ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ.

ಎಸ್‍ಡಿಆರ್‍ಎಫ್ ಹಣದ ಬಳಕೆಯಾಗಿದ್ದೆಷ್ಟು?: 2021-22ನೇ ಸಾಲಿಗೆ ಕೇಂದ್ರ ಸರ್ಕಾರದಿಂದ Sಆಖಈ ಅನುದಾನವಾಗಿ ಕರ್ನಾಟಕಕ್ಕೆ 1,054 ಕೋಟಿ ರೂ. ಮಂಜೂರು ಮಾಡಿದೆ. ಇದರಲ್ಲಿ ರಾಜ್ಯದ ಪಾಲು 263 ಕೋಟಿ ರೂಪಾಯಿ ಆಗಿದ್ದರೆ, 791 ಕೋಟಿ ರೂ. ಕೇಂದ್ರದ ಪಾಲಾಗಿದೆ. ಮೊದಲನೇ ಕಂತಿನ ಬಾಪ್ತು ಕೇಂದ್ರದ ಪಾಲಿನ 316.4 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನು 329.93 ಕೋಟಿ ರೂ. ರಾಜ್ಯದ ಪಾಲನ್ನು ಬಿಡುಗಡೆ ಮಾಡಲಾಗಿದೆ. ಈ ಎಲ್ಲಾ ಹಣವನ್ನು ಕೋವಿಡ್ ನಿಯಂತ್ರಣಕ್ಕಾಗಿ ಬಳಸಲಾಗುತ್ತಿದೆ.

ಒಟ್ಟು ಶೇ. 50ರಷ್ಟು ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಹಣದಲ್ಲಿ ಅರ್ಧದಷ್ಟು ಕೋವಿಡ್ ನಿರ್ವಹಣೆಗೆ ವ್ಯಯಿಸಿದರೆ, ಅತಿವೃಷ್ಟಿ, ಅನಾವೃಷ್ಟಿಯ ನಿರ್ವಹಣೆಗೆ ಎಸ್‍ಡಿಆರ್‍ಎಫ್‍ನಡಿ ಕೇವಲ ಶೇ.50ರಷ್ಟು ಮಾತ್ರ ಉಳಿಯಳಿದೆ. ಕಂದಾಯ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ ಜೂನ್ ಅಂತ್ಯದವರೆಗೆ ಎಸ್‍ಡಿಆರ್‍ಎಫ್‍ನಡಿ 646.38 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಕೋವಿಡ್ ನಿರ್ವಹಣೆಗಾಯೇ ಬಳಸಲಾಗಿದೆ.

ಯಾವ ಇಲಾಖೆಗೆ ಎಷ್ಟು ಬಿಡುಗಡೆ?: ಕಂದಾಯ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ ಕೋವಿಡ್ ನಿರ್ವಹಣೆಗಾಗಿ ಎಸ್‍ಡಿಆರ್‍ಎಫ್‍ನಡಿ ರಾಜ್ಯ ಸರ್ಕಾರ 646.38 ಕೋಟಿ ರೂ.ಗಳನ್ನು ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿದ್ದು, ಬಿಬಿಎಂಪಿ- 300 ಕೋಟಿ, ಎಲ್ಲಾ ಜಿಲ್ಲೆಗಳು- 266.33 ಕೋಟಿ ಪೆÇಲೀಸ್ ಇಲಾಖೆ- 10 ಕೋಟಿ, ಕಾರಾಗೃಹ ಇಲಾಖೆ- 5 ಕೋಟಿ, ಚಿತ್ರದುರ್ಗ ಜಿಲ್ಲೆ- 20 ಕೋಟಿ, ಅಗ್ನಿಶಾಮಕ- 5 ಕೋಟಿ, ಹಾಸನ- 10 ಕೋಟಿ, ಗ್ರಾಮ ಪಂಚಾಯತಿಗಳು- 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

Facebook Comments