ಕಾಂಗ್ರೆಸ್ ನೀಡಿದ್ದ ಅನುದಾನಕ್ಕಿಂತ ಬಿಜೆಪಿ ಸರ್ಕಾರದ ಅನುದಾನವೇ ಹೆಚ್ಚು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.5- ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ನಿಭಾಯಿಸಲು ನಿಗದಿಯಾಗಿರುವ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ನಿದಿಯಡಿ ಹಿಂದಿನ 10 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ನೀಡಿದ್ದ ಅನುದಾನಕ್ಕಿಂತಲೂ ಬಿಜೆಪಿ ನೇತೃತ್ವದ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ನೀಡಿರುವ ಅನುದಾನವೇ ಹೆಚ್ಚಾಗಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 2004ರಿಂದ 2014ರ ವರೆಗೂ ಕರ್ನಾಟಕಕ್ಕೆ 4,822.13 ಕೋಟಿ ಬಿಡುಗಡೆಯಾಗಿದ್ದರೆ, 2014ರಿಂದ 2019ರ ನಡುವೆ 7,170 ಕೊಟಿ ರೂ. ಬಿಡುಗಡೆಯಾಗಿದೆ.

ಯುಪಿಎ ಮೊದಲ ಹಂತದ 2004ರಿಂದ 2009ರವರೆಗೆ ಎನ್‍ಡಿಆರ್‍ಎಫ್‍ನಡಿ 907.28ಕೋಟಿ, ಎಸ್‍ಡಿಆರ್‍ಎಫ್‍ನಡಿ 438.62 ಕೋಟಿ ರೂ. ಸೇರಿ 1524.70 ಕೋಟಿ ಬಿಡುಗಡೆಯಾಗಿದ್ದರೆ, ಯುಪಿಎ ಎರಡನೇ ಅವಧಿಯಾದ 2009ರಿಂದ 2014ರವರೆಗೆ ಎನ್‍ಡಿಆರ್‍ಎಫ್‍ನಡಿ 2672.58 ಕೋಟಿ, ಎಸ್‍ಡಿಆರ್‍ಎಫ್‍ನಡಿ 624.85 ಕೋಟಿ ಸೇರಿ 3297.43 ಕೋಟಿ ಬಿಡುಗಡೆಯಾಗಿತ್ತು.

2014ರಲ್ಲಿ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೊದಲ ವರ್ಷದಲ್ಲಿ 418.12 ಕೋಟಿ ಬಿಡುಗಡೆಯಾಗಿತ್ತು. 2015-16ನೇ ಸಾಲಿನಲ್ಲಿ 1852.53 ಕೋಟಿ, 2016-17ರಲ್ಲಿ 2510 ಕೋಟಿ, 2017-18ರಲ್ಲಿ 1141.79 ಕೋಟಿ, 2018-19ರಲ್ಲಿ 813 ಕೋಟಿ ಬಿಡುಗಡೆಯಾಗಿದ್ದು, ಈ ವರ್ಷ ಎನ್‍ಡಿಆರ್‍ಎಫ್‍ನಡಿ 434.62ಕೋಟಿ ರೂ. ಬಿಡುಗಡೆಯಾಗಿದೆ.

ನಿನ್ನೆ 1200 ಕೋಟಿ ರೂ.ಗಳನ್ನು ಘೋಷಣೆ ಮಾಡಲಾಗಿದೆ. ಲೆಕ್ಕಾಚಾರಗಳ ಪ್ರಕಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ ಎಂದು ಬಿಜೆಪಿ ವಾದಿಸಿದೆ.

Facebook Comments