BIG BREAKING : ಕೊರೊನಾದಿಂದ ಕಂಗೆಟ್ಟ ಜನರಿಗೆ ಕೇಂದ್ರದಿಂದ ಅತಿದೊಡ್ಡ ಪರಿಹಾರ ಘೋಷಣೆ..! Full Details

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.19-ಮಾರಕಕೊರೊನಾ ವೈರಸ್‍ನಿಂದಾಗಿ 21 ದಿನಗಳ ಲಾಕ್‍ಡೌನ್‍ಗೆ ಒಳಗಾಗಿರುವ ಭಾರತದಲ್ಲಿ ಬಡವರು, ಕೃಷಿಕರು ಮತ್ತುಕಾರ್ಮಿಕರ ಸೇರಿದಂತೆ ವಿವಿಧಜನರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರಇಂದುಅತಿದೊಡ್ಡಆರ್ಥಿಕ ನೆರವು ಘೋಷಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸುಖಾತೆರಾಜ್ಯ ಸಚಿವಅನುರಾಗ್‍ಠಾಕೂರ್ ಸುದ್ದಿಗೋಷ್ಠಿಯಲ್ಲಿ ಈ ಪ್ಯಾಕೇಜ್‍ಗಳನ್ನು ಪ್ರಕಟಿಸಿದರು.

ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಪರಿಸ್ಥಿತಿ ನಿಯಂತ್ರಣಕ್ಕೆ ಬರುವತನಕಎಲ್ಲ ಸಾಲಗಳ ಮೇಲಿನ ಇಎಂಐ ವಸೂಲಾತಿಯನ್ನು ಮುಂದೂಡಲಾಗಿದೆ. ಇದನ್ನುಎಲ್ಲ ಬ್ಯಾಂಕ್‍ಗಳು, ಮತ್ತು ಹಣಕಾಸು ಸಂಸ್ಥೆಗಳು ಪಾಲಿಸುವಂತೆ ಸೂಚಿಸಿದರು.

ಕೊರೊನಾ ಹಿನ್ನೆಲೆಯಲ್ಲಿದೇಶಾದ್ಯಂತ ಲಾಕ್‍ಡೌನ್ ಪರಿಸ್ಥಿತಿ ಜಾರಿಯಲ್ಲಿದೆ. ಜನರ ಆದಾಯಕ್ಕೆ ತೊಂದರೆಯಾಗಿದೆ. ಈ ಸಮಯದಲ್ಲಿ ಸಾಲ ಪಡೆದವರ ಮೇಲೆ ಇಎಂಐಗಾಗಿ ಒತ್ತಡ ಹಾಕುವುದು ಸರಿಯಲ್ಲ. ಹೀಗಾಗಿ ಸದ್ಯಕ್ಕೆ ಇಎಂಐ ವಸೂಲಾತಿಯಿಂದ ವಿನಾಯಿತಿ ನೀಡಲಾಗುವುದುಎಂದು ನಿರ್ಮಲಾ ಹೇಳಿದರು.

ವಿವಿಧ ಸಾಲಗಳ ಮೇಲಿನ ಇಎಂಐಗಳನ್ನು ಮುಂದೂಡುವಂತೆ ವಿವಿಧ ಸಂಸ್ಥೆಗಳು ಮತ್ತುಕೈಗಾರಿಕಾ ವಲಯಗಳ ಪ್ರತಿನಿಧಿಗಳು ಕೇಂದ್ರ ಮತ್ತುರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದರು.

# ಬಡವರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರಿಗಾಗಿ ಪ್ರಧಾನಮಂತ್ರಿಗರೀಬ್‍ಕಲ್ಯಾಣ್‍ಯೋಜನೆ ಪ್ರಕಟ.
# ಗರೀಬ್‍ಕಲ್ಯಾಣ್‍ಯೋಜನೆ ಅಡಿ ತುರ್ತು ನೆರವಿಗಾಗಿ 1.70 ಲಕ್ಷಕೋಟಿರೂ. ಪ್ಯಾಕೇಜ್‍ಘೋಷಣೆ
# ಕೊರೊನೋ ವಿರುದ್ಧ ಹೋರಾಡುತ್ತಿರುವವರಿಗೆ 3 ತಿಂಗಳ ಕಾಲ 50 ಲಕ್ಷರೂ. ಪರಿಹಾರ ಪ್ರಕಟ.
# ವೈದ್ಯರು, ನರ್ಸ್‍ಗಳು, ಆರೋಗ್ಯ ಸೇವಿಕರು, ಪೌರಕಾರ್ಮಿಕರಿಗೆಉಚಿತಆರೋಗ್ಯ ವಿಮೆ ಸೌಲಭ್ಯ.
# 80 ಕೋಟಿಜನರಿಗೆ ಮುಂದಿನ 3 ತಿಂಗಳು 5 ಕೆಜಿ ಅಕ್ಕಿ ಮತ್ತು 5 ಕೆಜಿಗೋಧಿಉಚಿತ ವಿತರಣೆ.
# ನರೇಗಾಯೋಜನೆ ಅಡಿ 6 ಕೋಟಿ ರೂ.ಗಳ ಮೊದಲ ಕಂತುತಕ್ಷಣ ಬಿಡುಗಡೆ

# 8.69 ಕೋಟಿರೈತರಿಗೆಕಿಸಾನ್ ಸಮಾನ್‍ಯೋಜನೆ ಅಡಿ ಏಪ್ರಿಲ್ ಮೊದಲ ವಾರ 2,000 ರೂ. ನಗದು.
# ನರೇಗಾ ಕೂಲಿ ನೀಡಿಕೆ 182 ರೂ.ಗಳಿಂದ 202 ರೂ.ಗಳಿಗೆ ಏರಿಕೆ
# 3 ಕೋಟಿ ಬಡ ಹಿರಿಯ ನಾಗರಿಕರು, ವಿಧವೆಯರು ಮತ್ತು ದಿವ್ಯಾಂಗರಿಗೆ 1,000 ರೂ. ಗಳ ಪರಿಹಾರಧನಘೋಷಣೆ
# 20 ಕೋಟಿ ಮಹಿಳಾ ಜನ್‍ಧನ್‍ಖಾತೆದಾರರಿಗೆ 3 ತಿಂಗಳ ಕಾಲ ಮಾಸಿಕ 500 ರೂ.ಗಳ ನೀಡಿಕೆ.
# 8.3 ಬಿಪಿಎಲ್ ಕುಟುಂಬಗಳಿಗೆ ಮುಂದಿನ 3 ತಿಂಗಳ ತನಕಉಚಿತಎಲ್‍ಪಿಜಿ ಸಿಲಿಂಡರ್.

Facebook Comments

Sri Raghav

Admin