20 ಲಕ್ಷ ಕೋಟಿ ರೂ.ಗಳಲ್ಲಿ ಯಾರ‍್ಯಾರಿಗೆ ಎಷೆಷ್ಟು..? ಇಲ್ಲಿದೆ ನಿರ್ಮಲಾ ಸೀತಾರಾಮನ್ ಕೊಟ್ಟ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ : ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಯಾವುದೇ ಅಡಮಾನ ಇಲ್ಲದೆ 3 ಲಕ್ಷ ಕೋಟಿ ಸಾಲ ಹಾಗೂ ಮುಂದಿನ ವರ್ಷದ ಮಾರ್ಚ್‍ವರೆಗೆ ಟಿಡಿಎಸ್ ಮತ್ತು ಟಿಸಿಎಸ್ ಕಡಿತವನ್ನು ಶೇ.25ರಷ್ಟು ಕಡಿತ , ಸೇರಿದಂತೆ ನಾನಾ ರಂಗಗಳಿಗೆ ವಿಶೇಷ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಮಂಗಳವಾರ  ಕೋವಿಡ್ 19 ನಿಂದಾಗಿ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಪ್ರಧಾನಿ ನರೇಂದ್ರಮೋದಿ  20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದರು.   ಬುಧವಾರ ಈ ಪ್ಯಾಕೇಜಿಗೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ಯಾವುದಕ್ಕೆ ಹಣವನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬ ವಿವರವನ್ನು ಪ್ರಕಟಿಸಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಟಿಡಿಎಸ್​​ (ಟ್ಯಾಕ್ಸ್​ ಡಿಡಕ್ಟೆಡ್​ ಅಟ್​ ಸೋರ್ಸ್​-ಮೂಲದಲ್ಲಿ ತೆರಿಗೆ ಕಡಿತ ) ಮತ್ತು ಟಿಸಿಎಸ್​( ಟ್ಯಾಕ್ಸ್​ ಕಲೆಕ್ಟೆಡ್​ ಅಟ್​ ಸೋರ್ಸ್​-ಮೂಲದಲ್ಲಿ ತೆರಿಗೆ ಸಂಗ್ರಹ) ದರವನ್ನು ಶೇ.25ಕ್ಕೆ ಇಳಿಸಲಾಗಿದೆ. ಇದರಿಂದ 50,000 ಕೋಟಿ ರೂಪಾಯಿ ಮೌಲ್ಯದ ದ್ರವ್ಯತೆ ಬಿಡುಗಡೆಯಾಗಿ, ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.
ಟಿಡಿಎಸ್​ ಮತ್ತು ಟಿಸಿಎಸ್​ ಇಳಿಕೆ ನಾಳೆ (ಮೇ 14)ಯಿಂದಲೇ ಅನ್ವಯ ಆಗಲಿದ್ದು, 2021ರ ಮಾರ್ಚ್ 31ರವರೆಗೂ ಇರಲಿದೆ.ಹಾಗೆ ಪ್ರಸಕ್ತ ವರ್ಷದ ಆರ್ಥಿಕ ತೆರಿಗೆ ರಿಟರ್ನ್ಸ್​ ಸಲ್ಲಿಕೆಯ ಅವಧಿಯನ್ನು ಜು.31ರಿಂದ ನವೆಂಬರ್​ 30ಕ್ಕೆ ಮುಂದೂಡಲಾಗಿದೆ.
ಕಡಿಮೆ ಸಂಬಳ ಪಡೆಯುವ ನೌಕರರಿಗೆ ಲಾಕ್​ಡೌನ್​ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಅಂತಹ ಉದ್ಯೋಗಿಗಳಿಗೆ ಅನುಕೂಲವಾಗೆಂಬ ಉದ್ದೇಶದಿಂದ ತಿಂಗಳಿಗೆ 15,000ಕ್ಕೂ ಕಡಿಮೆ ಸಂಬಳ ಪಡೆಯುವ ನೌಕರರಿಗೆ ತಕ್ಷಣ ಪಿಎಫ್​ ಹಣವನ್ನು ಪಾವತಿ ಮಾಡಲಾಗುವುದು. ಇಪಿಎಫ್​ ಖಾತೆಗಳಿಂದ ಉದ್ಯೋಗಿಗಳು ತಮ್ಮ ಪಿಎಫ್​ ಹಣವನ್ನು ಡ್ರಾ ಮಾಡಿಕೊಳ್ಳಬಹುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
15 ಸಾವಿರಕ್ಕೂ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ತಕ್ಷಣ ಪಿಎಫ್​ ಹಣ ಪಾವತಿ ಮಾಡಲಾಗುವುದು. ಅಲ್ಲದೆ, ಪ್ರತಿ ತಿಂಗಳು 15,000ಕ್ಕೂ ಅಧಿಕ ಸಂಬಳ ಪಡೆಯುವ ನೌಕರರಿಗೆ ಕೂಡ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಉದ್ಯೋಗದಾತರ ಪಿಎಫ್​ ಪಾಲು ಶೇ. 12ರಿಂದ ಶೇ. 10ಕ್ಕೆ ಇಳಿಕೆ ಮಾಡಲಾಗಿದೆ.
6,750 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮತ್ತೆ 3 ತಿಂಗಳ ಕಾಲ ಅಂದರೆ ಜೂನ್, ಜುಲೈ, ಆಗಸ್ಟ್​ ತಿಂಗಳವರೆಗೆ ಸರ್ಕಾರವೇ ಪಿಎಫ್​ ಹಣವನ್ನು ಪಾವತಿ ಮಾಡಲಿದೆ.  ಕಂಪನಿ ಮತ್ತು ನೌಕರರ ಪಾಲಿನ ಪಿಎಫ್​ ಹಣವನ್ನು ಸರ್ಕಾರವೇ ಭರಿಸಲಿದೆ. 2,500 ಕೋಟಿ ಲಿಕ್ವಿಡಿಟಿ ಪ್ರೋತ್ಸಾಹದೊಂದಿಗೆ 72.22 ಉದ್ಯೋಗಿಗಳು ಈ ಇಪಿಎಫ್​ ಅನುಕೂಲ ಪಡೆಯಲಿದ್ದಾರೆ  ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಣ್ಣ ಕೈಗಾರಿಕೆ, ರಿಯಲ್ ಎಸ್ಟೇಟ್, ವಿದ್ಯುಚ್ಛಕ್ತಿ ನನಿಗಮಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಿಂಹಪಾಲಿನ ನೆರವು ದೊರೆತಿದೆ. ಅದರಲ್ಲಿಯೂ ಸಣ್ಣ ಮತ್ತು ಮಧ್ಯಮ ಕೈಕಾರಿಕೆಗಳಿಗೆ ಸುಲಭ ವಿಶೇಷ ಸಾಲವೂ ಸೇರಿದಂತೆ ಅತಿ ಹೆಚ್ಚಿನ ನೆರವನ್ನು ಹಣಕಾಸು ಮಂತ್ರಿ ನಿರ್ಮಲಾ ಘೋಷಿಸಿದರು. ಇದರ ಒಟ್ಟು ಮೊತ್ತ 3.18 ಲಕ್ಷ ಕೋಟಿ ಎಂದು ಅವರು ವಿವರಿಸಿದರು.
ಸ್ವಾಭಿಮಾನಿ, ಸದೃಢ ಭಾರತ ನಿರ್ಮಿಸುವುದು ಮತ್ತು ಒಟ್ಟಾರೆ ಪ್ರಗತಿಗೆ ಇಂಬು ನೀಡುವ ಸಲುವಾಗಿ ಈ ಪ್ಯಾಕೇಜ್ ಘೋಷಣೆಯಾಗುತ್ತಿದೆ. ದೇಶದ ಬಡವರು, ಕಾರ್ಮಿಕರು, ಶ್ರಮಿಕ ವರ್ಗದವರು, ಗುಡಿ ಕೈಗಾರಿಕೆಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳು, ಸಂಕಷ್ಟದಲ್ಲಿರುವ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ನೆರವು ಘೋಷಣೆ ಮಾಡಲಾಗಿದೆ.
ದೇಶವನ್ನು ಸ್ವಾವಂಬಿಯಾಗಿಸುವುದರ ಜೊತೆಗೆ ಆರ್ಥಿಕವಾಗಿ ಅಬಲರಾದವರನ್ನು ಸಬಲರಾಗಿಸುವ ನಿಟ್ಟಿನಲ್ಲಿ ಈ ಪ್ಯಾಕೇಜ್ ರೂಪಿಸಲಾಗಿದೆ ಎಂದು ನಿರ್ಮಲಾ ಹೇಳಿದರು‌. ಮೂರು ತಿಂಗಳವರೆಗೆ ಕಂಪನಿಗಳು ಮತ್ತು ಉದ್ಯೋಗಿಗಳ ಪಿಎಫ್ ಪಾಲನ್ನು ಭರಿಸಿದ್ದ ಸರ್ಕಾರ ಇದೀಗ ಇನ್ನೂ ಮೂರು ತಿಂಗಳು ಇದೇ ನೆರವು ಮುಂದುವರಿಸಲು ನಿರ್ಧರಿಸಿದೆ. ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗಳಿಗೆ ಸರ್ಕಾರದಿಂದ 2,500 ಕೋಟಿ ರೂ ನೆರವು ಸಿಕ್ಕಂತಾಗುತ್ತದೆ.
ಮುಂದಿನ 3 ತಿಂಗಳ ಕಾಲ ಅಂದರೆ, ಆಗಸ್ಟ್ ತಿಂಗಳವರೆಗೆ ಕಂಪನಿಗಳು ಪಿಎಫ್ ಹಣ ಭರಿಸುವ ಹೊರೆ ಇರುವುದಿಲ್ಲ. ಸರ್ಕಾರವೇ ಇದನ್ನು ಭರಿಸಲಿದೆ ಎಂದು ಘೋಷಿಸಿದ್ದಾರೆ.  ಪ್ರಫೋಷನಲ್ ಫೀ, ಕ್ಯಾಂಟ್ರಾಕ್ಟ್ ಪೇಮೆಂಟ್, ಬಡ್ಡಿ, ಬಾಡಿಗೆ, ಡಿವಿಡೆಂಡ್, ಕಮಿಷನ್, ಬ್ರೋಕರೇಜ್ ಸೇರಿದಂತೆ ಎಲ್ಲವೂ ಟಿಡಿಎಸ್ ಕಡಿತಕ್ಕೆ ಅನ್ವಯವಾಗಲಿದೆ. ಈ ಕಡಿತದ ಅನ್ವಯ ನಾಳೆಯಿಂದ ಮಾರ್ಚ್ 31, 2021ರವರೆಗೆ ಇರಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 50 ಸಾವಿರ ಕೋಟಿ ಹೊರೆ ಆಗಲಿದೆ.
ಆದಾಯ ತೆರಿಗೆ ಸಲ್ಲಿಕೆಗೆ ಈ ಮೊದಲು ಜುಲೈ 31 ರಿಂದ ಅಕ್ಟೋಬರ್ 31ರವರೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಈಗ ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಟ್ಯಾಕ್ಸ್ ಆಡಿಟ್ ಅವಧಿಯನ್ನು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ.
ವಿವಾದ್ ಸೇ ವಿಶ್ವಾಸ್ ಯೋಜನೆಯಡಿಯಲ್ಲಿ ಹೆಚ್ಚುವರಿ ಮೊತ್ತವಿಲ್ಲದೇ ಪಾವತಿಸಲು ಅವಕಾಶ ನೀಡಿದ್ದು, 31ನೇ ಡಿಸೆಂಬರ್ 2020ರವರೆಗೆ ಅವಧಿ ವಿಸ್ತರಿಸಲಾಗಿದೆ.ಸ್ವಾವಲಂಬಿ ಭಾರತಕ್ಕೆ ಮತ್ತು ಮೇಕ್ ಇನ್ ಇಂಡಿಯಾ ಉತ್ತೇಜಿಸಲು 200ಕೋಟಿ ರೂ ಕಡಿಮೆ ಸರ್ಕಾರಿ ಖರೀದಿಗಳಿಗೆ ಜಾಗತಿಕ ಟೆಂಡರ್ ಕರೆಯುವುದಕ್ಕೆ ನಿಷೇಧ. ಮುಂದಿನ 45 ದಿನದೊಳಗೆ ಸರ್ಕಾರಿ ಕಚೇರಿಗಳು, ಸಂಸ್ಥೆಗಳಿಂದ ಎಂಎಸ್ ಎಂ ಇ ಗಳಿಗೆ ಬಾಕಿ ಇರುವ ಮೊತ್ತ ಪಾವತಿಸಲಾಗುತ್ತದೆ.
# ಉಚಿತ ಅಕ್ಕಿ :

ಮುಂದಿನ ಮೂರು ತಿಂಗಳುಗಳು ಭಾರತದಲ್ಲಿರುವ 80 ಕೋಟಿ ಜನರಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿ ಉಚಿತವಾ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.ಈ ಯೋಜನೆಯಿಂದ ತುತ್ತು ಕೂಳಿಗೂ ಸಂಕಷ್ಟ ಪಡುತ್ತಿದ್ದ ಬಡವರು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ಮೂರು ತಿಂಗಳ ಕಾಲ 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ಎಲ್ಲ ಕುಟುಂಬದವರಿಗೆ ಮೂರು ತಿಂಗಳ ಕಾಲ ಒಂದು ಕೆಜಿ ಧವಸ-ಧಾನ್ಯ ಉಚಿತವಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ.

Facebook Comments

Sri Raghav

Admin