BREAKING : ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ವಿಸ್ತರಣೆ ಮತ್ತು ಪಾನ್-ಆಧಾರ್ ಲಿಂಕ್ ಮಾಡಲು ಜೂ.30 ವರೆಗೆ ಅವಕಾಶ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ ಮಾ. 34 : ಕರೋನಾ ಸೋಂಕಿನಿಂದ ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ವ್ಯವಸ್ಥೆಯ ಹಿಂಜರಿತ ಹಿನ್ನೆಲೆಯಲ್ಲಿ ಹಲವು ರಿಯಾಯಿತಿಗಳನ್ನು ಘೋಷಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂದಾಗಿದ್ದಾರೆ .

ಈ ಕುರಿತಂತೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನು ಈಗ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ . ಇದೇ ವೇಳೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವಿಳಂಬ ಮಾಡಿದರೆ ಈ ಹಿಂದೆ ಇದ್ದಂತಹ ಶೇ 12 ರಷ್ಟು ದಂಡವನ್ನು ಶೇ. 9ಕ್ಕೆ ಇಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಮಹತ್ವದ ನಿರ್ಧಾರದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಜೋಡಿಸುವ ಅವಧಿಯನ್ನು ಕೂಡ ಜೂನ್ 30 ರ ವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ಟಿಡಿಎಸ್ ಕಟ್ಟಲು ಸಹ ಜೂನ್ 30, 2020 ಕೊನೆಯ ದಿನಾಂಕವಾಗಿದ್ದು, ಟಿಡಿಎಸ್ ಮೇಲಿನ ಬಡ್ಡಿದರವನ್ನು 12ರಿಂದ 9ಕ್ಕೆ ಇಳಿಕೆ ಮಾಡಿದೆ.

Facebook Comments

Sri Raghav

Admin