ತೆರಿಗೆ ಇಳಿಕೆ ಘೋಷಣೆ ನಂತರ ಕೊಂಚ ಏರಿಕೆ ಕಂಡ ಷೇರು ಸೂಚ್ಯಂಕ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.20- ದೇಶದ ಆರ್ಥಿಕತೆ ಚೇತರಿಕೆಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೆಲವು ಮಹತ್ವದ ತೆರಿಗೆ ಇಳಿಕೆ ಪ್ರಕಟಿಸಿದ ನಂತರ ಮುಂಬೈ ಶೇರು ಪೇಟೆಯಲ್ಲಿ ಇಂದಿನ ಸೆನ್ಸೆಕ್ಸ್ (ಸಂವೇದಿ ಸೂಚ್ಯಂಕ) 1,300 ಪಾಯಿಂಟ್‍ಗಳಷ್ಟು ಏರಿಕೆ ಕಂಡು ಬಂದಿದೆ.

ಬೆಳಗಿನ ವಹಿವಾಟಿನಲ್ಲಿ ಸಾಧಾರಣ ಮೊತ್ತದಲ್ಲಿದ್ದ ಸೆನ್ಸೆಕ್ಸ್ , ಕೇಂದ್ರ ಸರ್ಕಾರದ ಕಾರ್ಪೊರೇಟ್ ತೆರಿಗೆ ಇಳಿಕೆ ಮತ್ತು ಯಾವುದೇ ಹೊಸ ತೆರಿಗೆಗಳ ಏರಿಕೆಯಿಲ್ಲದ ಕ್ರಮಗಳ ಘೋಷಣೆಯ ನಂತರ ಬಿಎಸ್‍ಸಿ (ಬಾಂಬೆ ಸ್ಟಾಕ್ ಎಕ್ಸ್‍ಚೇಂಜ್)ಯಲ್ಲಿ ಸಂವೇದಿ ಸೂಚ್ಯಂಕದಲ್ಲಿ ತೀವ್ರ ಏರಿಕೆ ಕಂಡು ಬಂದಿತು.

ತಯಾರಿಕಾ ವಲಯ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಹೊಸ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ನಿರ್ಮಲಾ ಸೀತಾರಾಮನ್ ಇಂದು ಕೆಲವು ತೆರಿಗೆ ಇಳಿಕೆ ಮತ್ತು ವಿನಾಯಿತಿಗಳನ್ನು ಘೋಷಿಸಿದರು.

ನವೋದ್ಯಮಗಳ ಉತ್ತೇಜನಕ್ಕೂ ಹೂಡಿಕೆಗೆ ಅವಕಾಶ ನೀಡಿರುವುದರಿಂದ ಆರ್ಥಿಕ ಪ್ರಗತಿಗೆ ಪೂರಕವಾಗಿದ್ದು , ಮುಂಬೈ ಷೇರು ಪೇಟೆಯಲ್ಲಿ ಭಾರೀ ಚೇತರಿಕೆ ಕಂಡು ಬಂದಿದೆ.

Facebook Comments

Sri Raghav

Admin