ರಾಜ್ಯಕ್ಕೆ ಅಗತ್ಯವಿರುವ ಆಹಾರಧಾನ್ಯ ಪೂರೈಸುತ್ತಿದೆ ಆಹಾರ ನಿಗಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.11-ಭಾರತ ಆಹಾರ ನಿಗಮವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ರಾಜ್ಯಕ್ಕೆ ಅಗತ್ಯವಾದ ಆಹಾರ ಧಾನ್ಯಗಳನ್ನು ನಿರಂತರವಾಗಿ ಪೂರೈಸುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಇದರೊಂದಿಗೆ ಭಾರತ ಸರ್ಕಾರ ಇತ್ತಿಚಿಗೆ ಘೋಷಿಸಿರುವ ಪ್ರಧಾನಮಂತ್ರಿಗಳ ಕಲ್ಯಾಣಯೋಜನೆಯಡಿಯಲ್ಲಿ ಏಪ್ರಿಲï ತಿಂಗಳಿನಿಂದ ಜೂನ್ ತಿಂಗಳವರೆಗೆ ಪ್ರತಿ ತಿಂಗಳು 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ರಾಜ್ಯದ ಸುಮಾರು 4 ಕೋಟಿ ಫಲಾನುಭವಿಗಳಿಗೆ ಉಚಿತವಾಗಿ ನೀಡಲು ಶ್ರಮಿಸುತ್ತಿದೆ.

ಹೆಚ್ಚುವರಿಯಾಗಿ, ರಾಜ್ಯ ಸರ್ಕಾರದಿಂದ ಪಡಿತರ ಚೀಟಿಗಳನ್ನು ನೀಡಲಾಗಿದೆ. ಆದರೆ ಎನ್‍ಎಫ್‍ಎಸ್‍ಎ ವ್ಯಾಪ್ತಿಗೆ ಒಳಪಡದ ಫಲಾನುಭವಿಗಳಿಗೆ ಮೂರು ತಿಂಗಳವರೆಗೆ ಪ್ರತಿ ವ್ಯಕ್ತಿಗೆ ಇನ್ನೂ 5 ಕೆಜಿ ಆಹಾರ ಧಾನ್ಯಗಳನ್ನು ನೀಡಲಾಗಿದೆ. ಆದ್ದರಿಂದ, ರಾಜ್ಯದ ಎಲ್ಲಾ ಪಡಿತರ ಚೀಟಿದಾರರು ಪಡಿತರ ಹೊಂದಲು ಅರ್ಹರಾಗಿರುತ್ತಾರೆ.

ಈ ಮೂರು ತಿಂಗಳು ಹೆಚ್ಚುವರಿ 5 ಕೆಜಿಗಳನ್ನು ಸ್ವೀಕರಿಸಲು. ಈ ಕಾರ್ಯ ನಿರ್ವಹಿಸುವುದಕ್ಕಾಗಿ, ಭಾರತ ಆಹಾರ ನಿಗಮವು ರಾಜ್ಯಾದ್ಯಂತ ಹರಡಿರುವ ತನ್ನೆಲ್ಲಾ 71 ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3000 ಕಾರ್ಮಿಕ ಮತ್ತು ಇತರೆ ಸಾರಿಗೆ ವ್ಯವಸ್ಥೆ ಸಲಕರಣೆಗಳನ್ನು ಜಾಗೃತಗೊಳಿಸಿ ಬೇರೆ ರಾಜ್ಯಗಳಿಂದ ಅಗತ್ಯವಾದ ಅಕ್ಕಿ ಮತ್ತು ಗೋಧಿಯನ್ನು ರೈಲ್ವೆ ಗಾಡಿಗಳ ಮೂಲಕ ರಾಜ್ಯದ ಗೋದಾಮುಗಳಿಗೆ ಸಾಗಿಸುತ್ತಿದೆ.

ಇದೇ ಸಮಯದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ಅಕ್ಕಿ ಮತ್ತು ಗೋಧಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಸರಬರಾಜು ಮಾಡಲಾಗುತ್ತಿದೆ. ಭಾರತ ಆಹಾರ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಿ.ವಿ.ಪ್ರಸಾದï ಅವರು 538.19 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಗೋದಾಮುಗಳಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಇದರಲ್ಲಿ 301.73 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು, 236.46 ಲಕ್ಷ ಮೆಟ್ರಿಕ್ ಟನ್ ಗೋಧಿ ಇದೆ . ಲಾಕ್‍ಡೌನ್ ಸಮಯದಲ್ಲಿ ಭಾರತ ಆಹಾರ ನಿಗಮವು ಗಣನೀಯ ಪ್ರಮಾಣದ 17.56 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು 08.46 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಸುಮಾರು 26 ಎಲïಎಂಟಿ ಹೆಚ್ಚುವರಿ ಉತ್ಪಾದಿಸುವ ರಾಜ್ಯಗಳಿಂದ ಕೊರತೆಯಿರುವ ರಾಜ್ಯಗಳಿಗೆ 929 ರೈಲ್ವೆ ಗಾಡಿಗಳಲ್ಲಿ ಸಾಗಾಟ ಮಾಡಲಾಗಿದೆ.

ಈ ಲಾಕï ಡೌನï ಸಮಯದಲ್ಲಿ, ಭಾರತ ಆಹಾರ ನಿಗಮವು 49 ಲಕ್ಷ ಚೀಲ (50 ಕೆಜಿ) ಗಳನ್ನು 87 ರೈಲ್ವೆ ಗಾಡಿಗಳಲ್ಲಿ ಕರ್ನಾಟಕಕ್ಕೆ ಸಾಗಿಸಲಾಗಿದೆ ಮತ್ತು 55 ಲಕ್ಷ ಅಕ್ಕಿ ಬ್ಯಾಗï ಗಳನ್ನು ಮತ್ತು 9 ಲಕ್ಷ ಗೋಧಿ ಬ್ಯಾಗ್‍ಗಳನ್ನು ರಾಜ್ಯಕ್ಕೆ ಸಾರ್ವಜನಿಕ ವಿತರಣೆಗಾಗಿ ಪೂರೈಕೆ ಮಾಡಲಾಗಿದೆ.

Facebook Comments

Sri Raghav

Admin