ಕಳಪೆ ಬೆಳೆ ಪೂರೈಕೆ ಸಾಬೀತಾದಲ್ಲಿ ಗುತ್ತಿದಾರ ಬ್ಲಾಕ್ ಲಿಸ್ಟ್‌ಗೆ ; ಸಚಿವ ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಜಿಲ್ಲೆಯಲ್ಲಿ ಅಕ್ಷರ ದಾಸೋಹ ಯೊಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಪುರೈಕೆಯಾಗಿದೆ‌ ಎನ್ನಲಾದ ಬೆಳೆ ಕಳಪೆಯಾಗಿರುವುದು ಸಾಬೀತಾದಲ್ಲಿ ಗುತ್ತಿಗೆದಾರನನ್ನು ಬ್ಲಾಕ್ ಲೀಸ್ಟ್ ಗೆ ಸೆರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ‌. ಗೋಪಾಲಯ್ಯ ತಿಳಿಸಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣ ಆಹಾರ ಇಲಾಕೆ ಗೋಡೌನ್ ಭೇಟಿ ನೀಡಿ ಬೆಳೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆಪೆ ತೊಗರಿ ಬೆಳೆ‌ ಪೂರೈಕೆಯಾಗುತ್ತಿರುವ ಬಗ್ಗೆ ದೂರುಗಳು ಕೆಳಿಬಂದ ಹಿನ್ನೆಲೆಯಲ್ಲಿ ಇಂದು ಕುದ್ದು ಪರಿಶೀಲನೆಗೆ ಬಂದಿದ್ದು ಬೆಳೆಯನ್ನು ಮೈಸೂರಿನ ಪ್ರಯೊಗಾಲಯಕ್ಕೆ ಗುಣಮಟ್ಟ ಪರೀಕ್ಷೆಗೆ ಕಳುಹಿಸಲಾಗುವುದು ವರದಿ ಬಂದ ಬಳಿಕ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಸರಕಾರದ ಪ್ರಥಮ ಆದ್ಯತೆ ಆದರೆ ಅಧಿಕಾರಿಗಳ ಗಮನಕ್ಕೆ ಬಾರದಂತೆ ಕಳೆಪೆ ಬೆಳೆ ಪೂರೈಕೆ ಯಾಗಿದ್ದರೆ ಅದಕ್ಕೆ ಇಲಾಖೆಯ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸಹ ಸೂಚನೆ ನೀಡಿರುವುದಾಗಿ ಗೋಪಾಲಯ್ಯ ತಿಳಿಸಿದರು.

ಇಂದು ಗೊಡೌನ್ ಪರಿಶೀಲನೆ ವೇಳೆ ಬೆಳೆ ಗುಣಮಟ್ಟ ಉತ್ತಮವಾಗಿದೆ ಆದರೆ ಜಿಲ್ಲೆಯ ಇತರೆಡೆ ಸರಬರಾಜಾಗಿರುವ ಬೆಳೆ ಕಳಪೆಯಾಗಿದೆ..ಈ ಬಗ್ಗೆಯೂ ಸೂಕ್ತ ವರದಿ‌ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು..

# ವಾದಕ್ಕಿಳಿದ ಅಧಿಕಾರಿ..!!
ಇನ್ನೂ ಗೊಡೌನ್ ನಲ್ಲಿ ತೊಗರಿ ಬೆಳೆ ಪರಿಶೀಲಿಸುವ ವೇಳೆ ಇಲ್ಲಿರುವ ಮೂರ್ನಾಲ್ಕು ಪ್ರತ್ಯೇಕ ಚೀಲದ ಬೆಳೆಯನ್ನು ಮೈಸೂರಿಗೆ‌ ಪರೀಕ್ಷೆ ಗೆ ಕಳುಹಿಸಿ‌‌ ಎಂದು ಅಧಿಕಾರಿಗೆ ಸೂಚಿಸಿದರು ಆದರೆ ಇದಕ್ಕೆ ವಿರುದ್ಧವಾಗಿ ಮಾತನಾಡಿದ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡು ಸಚಿವರು ಬೆಂಗಳೂರಿನಿಂದ ಇಲ್ಲಿಗೆ ಸುಮ್ಮನೆ ಬಂದು‌ ಹೋಗಲು ಬಂದಿಲ್ಲಾ….ಸರಿಯಾಗಿ ಎಲ್ಲಾ ಚೀಲವನ್ನು ಪರಿಶೀಲನೆ ಮಾಡಿ ಪರೀಕ್ಷೆ ಗೆ ಕಳುಹಿಸಿ ಎಂದು ತಾಕೀತು ಮಾಡಿದರು..

# ಶಾಸಕರ ಸಮ್ಮುಖದಲ್ಲಿ ಪರಿಶೀಲನೆ;
ಕಳೆಪೆ ತೊಗರಿ ಬೆಳೆ ಪುರೈಕೆ ಬಗ್ಗೆ ಜಿ.ಪಂ‌ ಸಭೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಅರೋಪ ಮಾಡಿದ್ದ ಶಾಸಕರಾದ ಸಿ.ಎನ್.ಬಾಲಕೃಷ್ಣ ಹಾಗೂ ಎಂ.ಎ.ಗೋಪಾಲಸ್ವಾಮಿ ಅವರ ಜೊತೆಯಲ್ಲಿ ಗೊಡೌನ್ ಗೆ ತೆರಳಿದ ಸಚಿವರು ಅವರ ಎದುರೆ ಚೀಲ ತೆರೆದು ತೊಗರಿ ಗುಣಮಟ್ಟದ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಆದರೆ ಅಂಗನವಾಡಿಗಳಿಗೆ ಪೂರೈಕೆ ಯಾದ ಬೆಳೆಗೂ ಇಲ್ಲಿರುವ ಬೆಳೆಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಶಾಸಕರು ಸಚಿವರ ಗಮನಕ್ಕೆ‌ ತಂದರು ನಂತರ ಸಚಿವರು ಅಧಿಕಾರಿಗಳನ್ನು ಕರೆದು ನಾಲ್ಕೈದು ಚಿಲಗಳಲ್ಲಿನ ಬೆಳೆ ತೆಗೆದು ಪರೀಕ್ಷೆಗೆ ಕಳುಹಿಸಲು‌ ತಿಳಿಸಿದರು.

ಅಲ್ಲದೆ ತಾಲ್ಲೂಕಿನ ನಾನಾ ಅಂಗನವಾಡಿ ಕೇಂದ್ರ ಗಳಿಗೆ ಸರಬರಾಜಾಗಿರುವ ಕಳಪೆ ಬೆಳೆ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಗೆ‌ ಸೂಚನೆ ನೀಡಿದರು.

# “ಬಾಂಬೆ ಡೇಸ್” ಪುಸ್ತಕ ಬರೆಯಲಿ ಓದುವೆ…!!!

ಎಚ್ ವಿಶ್ವನಾಥ್ ಅವರಿಗೆ ಸೂಕ್ತಸ್ಥಾನಮಾನ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಹಾಗೂ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಅವರು ಬರೆಯುತ್ತಿರುವ ಪುಸ್ತಕದಲ್ಲಿ ಬಿಜೆಪಿ ಸರ್ಕಾರ ರಚನೆಗೂ ಮುನ್ನ ನಡೆದಂತ ವಿದ್ಯಮಾನಗಳ ಬಗ್ಗೆ ಬರೆಯುವುದಾಗಿ ಹೇಳಿದ್ದಾರೆ.

ಅವರು ಈಗಾಗಲೇ ಬಹಳಷ್ಟು ಪುಸ್ತಕಗಳು ಬರೆದಿದ್ದು ಜನ ಮೆಚ್ಚುಗೆ ಪಡೆದಿದೆ “ಬಾಂಬೆ ಡೇಸ್” ಎಂಬ ಪುಸ್ತಕ ಬರೆಯುತ್ತಿದ್ದು ಅದರಲ್ಲಿ ಸರ್ಕಾರ ರಚನೆಗೆ ಸಂಬಂಧಪಟ್ಟಂತೆ ಅವರು ಬರೆದರೆ ಅದು ಅವರ ವೈಯಕ್ತಿಕ ವಿಷಯವಾಗಿದ್ದು ಅದನ್ನು ನಾನು ಓದುವೆ ಅಲ್ಲದೆ ಈ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು.

Facebook Comments

Sri Raghav

Admin