ಗೃಹ ಪ್ರವೇಶದ ಊಟ ಸೇವಿಸಿ 40 ಮಂದಿ ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಜ.28- ಗೃಹ ಪ್ರವೇಶದ ಊಟ ಸೇವಿಸಿ 40 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಪ್ರಕರಣ ತಾಲೂಕಿನ ಮತ್ತಾವರ(ಕಬ್ಬನಮನೆ)ಗ್ರಾಮದಲ್ಲಿ ನಡೆದಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದೆ. ತಾಲೂಕಿನ ಬಿಕ್ಕೋಡು ಹೋಬಳಿ ಮತ್ತಾವ (ಕಬ್ಬಿನಮನೆ)ಗ್ರಾಮದ ಮಲ್ಲೇಶ್ ಎಂಬುವವರ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಸ್ನೇಹಿತರು, ಸಂಬಂಧಿಕರು ಆಗಮಿಸಿ ಮದ್ಯಾಹ್ನ ಊಟ ಮಾಡಿ ತೆರಳಿದ್ದರು.

ಆದರೆ ನಿನ್ನೆ ಬೆಳಗ್ಗೆಯಿಂದ ಒಬ್ಬೊಬ್ಬರಿಗೆ ಸಣ್ಣದಾಗಿ ಬೇದಿ ಕಾಣಿಸಿಕೊಂಡಿದೆ. ನಂತರ ಸಂಜೆಯಾಗುತಿದ್ದಂತೆ ಗ್ರಾಮದ ಸಾಕಷ್ಟು ಜನರಿಗೆ ತೀವ್ರವಾದ ವಾಂತಿಬೇದಿ, ಹೊಟ್ಟೆ ನೋವು ಸೇರಿದಂತೆ ಕೆಲವರಿಗೆ ಲೋ ಬಿಪಿಯಿಂದ ಸುಸ್ತಾಗಿದ್ದಾರೆ. ತಕ್ಷಣವೆ ಕೆಲವರನ್ನು ಗ್ರಾಮಸ್ಥರು ಆಟೋ ಇನ್ನಿತರೆ ವಾಹನಗಳಲ್ಲಿ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆಗೆ ದಾಖಲಿಸಲಾಗುತ್ತಿದೆ.

ಅಹಾರದಲ್ಲಿನ ವ್ಯತ್ಯಾಸದಿಂದ ಹೀಗಾಗಿದೆ ಎನ್ನುತ್ತಾರೆ ಮತ್ತಾವರ(ಕಬ್ಬನಮನೆ) ಗ್ರಾಮಸ್ಥರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿರುವರಿಗೆ ಡಾ.ನರಸೇಗೌಡ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡುತಿದ್ದಾರೆ.

ಈ ಸಂದರ್ಭ ಮಾತನಾಡಿದ ಡಾ.ನರಸೇಗೌಡ, ಈಗಾಗಲೆ ಆಸ್ಪತ್ರೆಗೆ ಸಾಕಷ್ಟು ಜನರು ಚಿಕಿತ್ಸೆಗೆಂದು ಬರುತಿದ್ದಾರೆ. ಎಲ್ಲರಲ್ಲೂ ಒಂದೇ ರೀತಿಯ ಸಮಸ್ಯೆ ಕಾಡುತಿದ್ದು, ಭಾನುವಾರದ ಮಧ್ಯಾಹ್ನದ ಅಹಾರದಲ್ಲಿನ ವ್ಯತ್ಯಾಸದಿಂದ ಹೀಗಾಗಿದೆ ಎನ್ನುತಿದ್ದಾರೆ. ಈಗಾಗಲೆ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

Facebook Comments