ಅಮೆರಿಕದ ಶ್ರೀಮಂತರ ಪಟ್ಟಿಯಲ್ಲಿ 7 ಭಾರತೀಯರಿಗೆ ಸ್ಥಾನ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್ ಸೆ.9-ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕದ 400 ಅತ್ಯಂತ ಸಿರಿವಂತರ ಫೋಬ್ರ್ಸ್ ಪಟ್ಟಿ ಪ್ರಕಟಗೊಂಡಿದೆ. ಅಮೆಜಾನ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  (ಸಿಒಒ) ಜೆಫ್ ಬಿಜೊಸ್ (56) ಅಗ್ರಸ್ಥಾನದಲ್ಲಿದ್ದಾರೆ.

ಪ್ರತಿಷ್ಠಿತ ಮೈಕ್ರೋಸಾಫ್ಟ್ ಮಾಜಿ ಮುಖ್ಯಸ್ಥ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‍ಬರ್ಗ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಸಾಲಿನ 400 ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮೂಲದ ಏಳು ಉದ್ಯಮಿಗಳು ಸ್ಥಾನ ಪಡೆದಿದ್ದಾರೆ.

ಹಲವು ಉದ್ಯಮಗಳ ಒಡೆಯರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವರಮಾನ ಕೋವಿಡ್ ಹಾವಳಿಯಿಂದ ಕುಸಿದಿದ್ದು, 339ನೇ ಸ್ಥಾನದಲ್ಲಿದ್ದಾರೆ. ಭಾರತೀಯ ಮೂಲದ ಅಮೆರಿಕ ಉದ್ಯಮಿಗಳಾದ ಝಸ್ಕಲೆರ್ ಸಂಸ್ಥೆ ಸಿಇಒ ಜೈ ಚೌಧರಿ(85ನೇ ಸ್ಥಾನ), ಸಿಂಫೋನಿ ಟೆಕ್ನೋಲಾಜಿ ಗ್ರೂಪ್ ಸಂಸ್ಥಾಪಕ ರೋಮೆಶ್ ವಾಧ್ವಾನಿ(238),

ವೇಫೇರ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀರಜ್ ಶಾ(299), ಖೋಸ್ಲಾ ವೆಂಚರ್ಸ್‍ನ ಮುಖ್ಯಸ್ಥ ವಿನೋದ್ ಖೋಸ್ಲಾ(353), ಶರ್‍ಪಾಲೋಸ್‍ನ ಕವಿತಾರ್ಕ್ ರಾಮ್ ಶ್ರೀರಾಮ್(359), ವಿಮಾನಯಾನ ಸಂಸ್ಥೆಯ ಮಾಲೀಕ ರಾಕೇಶ್ ಗಂಗ್ವಾಲ್(359), ಹಾಗೂ ವರ್ಕ್‍ಡೇ ಸಿಇಒ ಅನೀಲ್ ಭುರ್ಸಿ(359), ಭೋಬ್ರ್ಸ್ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಮೊದಲ ಮೂರು ಅಗ್ರಸ್ಥಾನದಲ್ಲಿರುವ ಜೆಫ್, ಬಿಲ್‍ಗೇಟ್ಸ್ ಮತ್ತು ಝುಕೆರ್‍ಬರ್ಗ್‍ಗಳ ಆದಾಯವು ಅನುಕ್ರಮವಾಗಿ 1.79 ಶತಕೋಟಿ ಡಾಲರ್, 111 ಬಿಲಿಯನ್ ಡಾಲರ್ ಹಾಗೂ 85 ಶತಕೋಟಿ ಡಾಲರ್‍ಗಳಷ್ಟಿದೆ.

Facebook Comments