ಸಶಸ್ತ್ರ ಪಡೆಗಳ ನಿಧಿಗೆ ದೇಣಿಗೆ ನೀಡಲು ಪ್ರಧಾನಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಡಿ.7- ಸಶಸ್ತ್ರ ಪಡೆಗಳ ನಿಧಿಗೆ ಉದಾರ ದೇಣಿಗೆ ನೀಡುವಂತೆ ಪ್ರಧಾನಿ ಮೋದಿ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ. ಸಶಸ್ತ್ರ ಪಡೆಗಳ ಧ್ವಜಾ ದಿನಾಚರಣೆ ಸಂದರ್ಭದಲ್ಲಿ ಯೋಧರು ಮತ್ತು ಅವರ ಕುಟುಂಬ ವರ್ಗದವರಿಗೆ ಶುಭಾಷಯ ಸಲ್ಲಿಸಿರುವ ಮೋದಿ ಈ ದಳದ ಯೋಧರ ಸೇವೆ ಮತ್ತು ತ್ಯಾಗ ಸದಾ ಸ್ಮರಣೀಯ. ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಧ್ವಜಾ ನಿಧಿಗೆ ಸಾರ್ವ ಜನಿಕರು ಉದಾರ ದೇಣಿಗೆ ನೀಡಬೇಕು. ಆ ಮೂಲಕ ಹುತಾತ್ಮ ಯೋಧರ ಕುಟುಂಬ ಗಳಿಗೆ ನೆರವಾಗಬೇಕೆಂದು ಮನವಿ ಮಾಡಿದರು.

Facebook Comments