ಅಕ್ರಮವಾಗಿ ನೆಲೆಸಿದ್ದ 14 ವಿದೇಶಿಗರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಪಾಲ್ಗಾರ್ (ಮಹಾರಾಷ್ಟ್ರ), ಜ.22- ವಿಸಾ ಮತ್ತು ಪಾಸ್‍ಫೋರ್ಟ್ ಅವಧಿ ಮುಗಿದಿದ್ದರೂ ಸ್ವದೇಶಕ್ಕೆ ಹಿಂದಿರುಗದೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 14 ಮಂದಿ ವಿದೇಶಿ ಪ್ರಜೆಗಳನ್ನು ಇಲ್ಲಿ ಪೊಲೀಸರು ಪತ್ತೆ ಬಂಧಿಸಿದ್ದಾರೆ. ವಿದೇಶಿಗರ ಅಕ್ರಮ ವಾಸ್ತವ್ಯದ ಸುಳಿವಿನ ಮೇರೆಗೆ ಪೊಲೀಸರು ಪಾಲ್ಗಾರ್‍ನ ಪ್ರಗತಿ ನಗರ ವ್ಯಾಪ್ತಿಯಲ್ಲಿರುವ ಮಳಿಗೆ ಮೇಲೆ ದಾಳಿ ನಡೆಸಿ ಯಾವುದೇ ಅಧಿಕೃತ ದಾಖಲೆಗಳು ಇಲ್ಲದೆ ವಾಸಿಸುತ್ತಿದ್ದ 14 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ವಕ್ತಾರ ಟಿಕಾರಾಮ್ ತತ್ಕಾರ್ ತಿಳಿಸಿದ್ದಾರೆ.

ಬಂಧಿತರಲ್ಲಿ 12 ಮಂದಿ ನೈಜೀರಿಯಾ ಪ್ರಜೆಗಳು, ಉಗಾಂಡದ ಒಬ್ಬ ಮತ್ತು ಐವರಿಕೋಸ್ಟ್‍ನ ಒಬ್ಬ ಎಂದು ತಿಳಿದುಬಂದಿದೆ. ವಿದೇಶಿಗರ ಕಾಯ್ದೆ ಮತ್ತು ಪಾಸ್‍ಫೋರ್ಟ್ ಕಾಯ್ದೆಯನ್ನು ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Facebook Comments