ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ವಿದೇಶಿಗರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.4- ಮೆಡಿಕಲ್ ಹಾಗೂ ಟೂರಿಸ್ಟ್ ವೀಸಾಗಳ ಮೇಲೆ ಭಾರತಕ್ಕೆ ಬಂದು ಅವಧಿ ಮುಗಿದರೂ ತಮ್ಮ ದೇಶಕ್ಕೆ ತೆರಳದೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿ ಮಾದಕ ವಸ್ತು ಕೊಕೈನ್ ಮತ್ತು ಎಂಡಿಎಂಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಹಾಗೂ ಐವರಿ ಪೋಸ್ಟ್ ದೇಶದ ಮೂವರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ದೇಶದ ಕಿಜ್ ಪ್ರಿನ್ಸ್ , ನೈಜ್‍ವೇ ಎಜಿಕಿ ಮತ್ತು ಐವರಿ ಕೋಸ್ಟ್‍ನ ದೋಸ್ಸಾ ಕೋಸ್ಟಾ ಬಂಧಿತ ಆರೋಪಿಗಳು. ಇವರಿಂದ 13.746 ಕೊಕೈನ್, 2.850ಗ್ರಾಂ ಎಂಡಿಎಂಎ ಮಾದಕ ವಸ್ತುಗಳು, 5 ಮೊಬೈಲ್ ಪೋನ್‍ಗಳು, 2 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.

ಕೋಣನಕುಂಟೆ ವ್ಯಾಪ್ತಿಯ ಜೆಪಿ ನಗರ, 8ನೆ ಹಂತ, ಕೊತ್ತನೂರು ಗ್ರಾಮದ ಅರಳಿಮರದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಕೋಣನಕುಂಟೆ ಠಾಣೆ ಇನ್ಸ್‍ಪೆಕ್ಟರ್ ಧರ್ಮೇಂದ್ರ ಮತ್ತು ಸಿಬ್ಬಂದಿ ನಿನ್ನೆ ಮಧ್ಯಾಹ್ನ 12 ಗಂಟೆಗೆ ದಾಳಿ ಮಾಡಿ ಈ ಮೂವರನ್ನು ಬಂಧಿಸಿದ್ದಾರೆ.

ನಗರದ ಟೆಕ್ಕಿಗಳಿಗೆ ಮಾದಕ ವಸ್ತು ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ಮೂವರು ಈ ಕೃತ್ಯದಲ್ಲಿ ತೊಡಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Facebook Comments