ರಾಜ್ಯಸಭೆಯಲ್ಲೂ ಇಂದೇ ಕೃಷಿ ಕಾಯ್ದೆಗಳು ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.29- ವಿವಾದಿತ ಕೃಷಿ ಕಾನೂನಗಳನ್ನು ವಾಪಸ್ ಪಡೆಯುವ ಮಸೂದೆಯನ್ನು ಇದೇ ದಿನ ರಾಜ್ಯಸಭೆಯಲ್ಲೂ ಮಂಡಿಸಿ ಅಂಗೀಕಾರ ಪಡೆಯುವುದಾಗಿ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಮಸೂದೆ ಹಿಂಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಯಲ್ಲೂ ಇದೇ ದಿನ ಮಸೂದೆ ಮಂಡಿಸುವುದಾಗಿ ತಿಳಿಸಿದರು. ಈ ನಡುವೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ಗದ್ದಲದಿಂದ ಮಧ್ಯಾಹ್ನ 2 ಗಂಟೆವರೆಗೂ ಕಲಾಪ ನಡೆಯಲಿಲ್ಲ.

ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಹಲವಾರು ಬಾರಿ ಪ್ರಯತ್ನ ಪಟ್ಟರೂ ಪ್ರತಿಪಕ್ಷಗಳು ಕೃಷಿ ಮಸೂದೆ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ಗದ್ದಲ ಎಬ್ಬಿಸಿದರು.

ಕೆಲವರು ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದಾಗ, ಇದು ಅಸಂಪ್ರದಾಯಿಕ ಕ್ರಮ. ನಿಯಮಬಾಹಿರವಾಗಿ ಧರಣಿ ನಡೆಸಿದರೆ ಸದಸ್ಯರ ಹೆಸರು ಹೇಳಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅವೇಶನದ ಸಮಯ ಅಮೂಲ್ಯವಾದದ್ದು. ಅದನ್ನು ಹಾಳು ಮಾಡಬೇಡಿ.

ಈ ಹಿಂದೆ ಕೂಡ ಇದೇ ರೀತಿ ಗದ್ದಲವಾಗಿ ಕಲಾಪ ವ್ಯರ್ಥವಾಗಿದೆ. ಸುಗಮ ಕಲಾಪಕ್ಕೆ ಅವಕಾಶ ಕೊಡಿ ಎಂದು ಪದೇ ಪದೇ ಮನವಿ ಮಾಡಿದರು. ಆದರೂ ಸದಸ್ಯರು ಕೇಳದೇ ಇದ್ದಾಗ ಖಾರವಾಗಿ ಪ್ರತಿಕ್ರಿಯಿಸಿದ ವೆಂಕಯ್ಯ ನಾಯ್ಡು ಅವರು ಭೋಜನ ವಿರಾಮಕ್ಕೆ ಕಲಾಪವನ್ನು ಮುಂದೂಡಿದರು.

Facebook Comments

Sri Raghav

Admin