ಬಿಜೆಪಿ ಸಂಸದೀಯ ಪಕ್ಷ, ಎನ್‍ಡಿಎ ನಾಯಕರಾಗಿ ಇಂದು ಮೋದಿ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 25- ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಸಾರಥ್ಯ ವಹಿಸಲು ನರೇಂದ್ರ ಮೋದಿ ಅವರನ್ನು ಬಿಜೆಪಿ ಸಂಸದೀಯ ಪಕ್ಷ ಮತ್ತು ಎನ್‍ಡಿಎ ನಾಯಕರನ್ನಾಗಿ ಇಂದು ಸರ್ವಾನು ಮತದಿಂದ ಆಯ್ಕೆ ಮಾಡಲಾಗುತ್ತದೆ.

ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ನಡೆಯಲಿರುವ ಎನ್‍ಡಿಎ ನಾಯಕರ ಸಭೆಯಲ್ಲಿ ಮೋದಿ ಅವರು, ರಾಷ್ಟ್ರೀಯ ಪ್ರಜಾಸತ್ಯಾತ್ಮಕ ಮೈತ್ರಿಕೂಟದ ನಾಯಕರಾಗಿ ಇಂದು ಆಯ್ಕೆಯಾಗಲಿದ್ದು, ಹೊಸ ಸರ್ಕಾರ ರಚನೆಗೆ ಅನುವಾಗಲಿದೆ.

ಕೇಂದ್ರ ಮಂತ್ರಿಮಂಡಲವನ್ನು ವಿಸರ್ಜಿಸಲಾಗಿದ್ದು, ಪ್ರಧಾನಿ ಸ್ಥಾನಕ್ಕೆ ಮೋದಿ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಹೊಸ ಎನ್‍ಡಿಎ ಸರ್ಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಪ್ರಕ್ರಿಯೆ ಆರಂಭವಾಗಿದೆ.

ಮೋದಿ ಅವರನ್ನು ಬಿಜೆಪಿ ಸಂಸದೀಯ ಪಕ್ಷ ಮತ್ತು ಎನ್‍ಡಿಎ ನಾಯಕರಾಗಿ ಆಯ್ಕೆಯಾದ ನಂತರ ಸರ್ಕಾರ ರಚನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಹ್ವಾನ ನೀಡಲಿದ್ದಾರೆ. ಹದಿನಾರನೇ ಲೋಕಸಭೆ ಅವಧಿ ಜೂ. 3ರಂದು ಕೊನೆಗೊಳ್ಳಲಿದೆ.

ಅದಕ್ಕೂ ಮೊದಲು ಹದಿನೇಳನೇ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಎನ್‍ಡಿಎ ನಾಯಕರು ಹೊಸ ಸರ್ಕಾರ ರಚನೆಗಾಗಿ ಅನುಸರಿಸಬೇಕಾದ ಔಪಚಾರಿಕ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.

ಸಂಸತ್‍ನಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆಗೆ ನೆರವಾಗಲು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನಿಲ್ ಅರೋರಾ ಮತ್ತು ಇನ್ನಿಬ್ಬರು ಆಯುಕ್ತರು ರಾಷ್ಟ್ರಪತಿ ಅವರಿಗೆ ಚುನಾಯಿತರಾದ ನೂತನ 542 ಸಂಸದರ ಪಟ್ಟಿಯನ್ನು ನೀಡಿದ್ದಾರೆ.

ಕೇಂದ್ರ ಮಂತ್ರಿ ಮಂಡಲ ವಿಸರ್ಜನೆಗೆ ಸಚಿವ ಸಂಪುಟ ಶಿಫಾರಸ್ಸಿನ ನಂತರ ಹೊಸ ಸರ್ಕಾರ ರಚನೆ ಪ್ರಕ್ರಿಯೆಗೆ ಅನುಸರಿಸಬೇಕಾಗದ ಔಪಚಾರಿಕ ಕ್ರಮದಲ್ಲಿ ರಾಷ್ಟ್ರಪತಿ ಈಗಾಗಲೇ ತೋಡಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin