ಹಿರಿಯ ಕ್ರಿಕೆಟ್ ಪಟು ಕಿಶನ್ ರುಂಗ್ಟಾ ಕೊರೊನಾಗೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ 2-ಭಾರತೀಯ ಕ್ರಿಕೆಟ್ ಮಂಡಳಿಯ ಮಾಜಿ ರಾಷ್ಟ್ರೀಯ ಆಯ್ಕೆಗಾರ ಹಾಗೂ ಹಿರಿಯ ಕ್ರಿಕೆಟ್ ಪಟು ಕಿಶನ್ ರುಂಗ್ಟಾ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

88 ವರ್ಷ ವಯಸ್ಸಿನ ರುಂಗ್ಟಾ ಅವರನ್ನು ರಾಜಸ್ಥಾನದ ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

1953 ರಿಂದ 1970 ರವರೆಗೆ 53ಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ ರುಂಗ್ಟಾ 1998 ರಲ್ಲಿ ಕೇಂದ್ರ ವಿಭಾಗದ ರಾಷ್ಟ್ರೀಯ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದ್ದರು.

Facebook Comments

Sri Raghav

Admin