ಕ್ರಿಕೆಟಿಗ ಮೂರ್ತೂಭಾಯ್ ಹೃದಯಘಾತದಿಂದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.18- ಮಿಜೋರಾಂನ 19 ವರ್ಷದೊಳಗಿನ ಕ್ರಿಕೆಟ್ ತಂಡದ ಕೋಚ್ ಮುರ್ತಾಜಾ ಲೋದ್ಗರ್ ಹೃದಯಘಾತದಿಂದ ನಿಧನರಾಗಿದ್ದಾರೆ. ಎಡಗೈ ಸ್ಪಿನ್ನರ್ ಆಗಿ ಗಮನ ಸೆಳೆದಿದ್ದ ಲೋದ್ಗರ್ ಅವರು ಮಿಜೋರಾಂನ 19 ವರ್ಷದೊಳಗಿನವರ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಮಾತ್ರವಲ್ಲ ಮೂರ್ತುಭಾಯ್ ಎಂದು ಚಿರಪರಿಚಿತರಾಗಿದ್ದರು.

ನಿನ್ನೆ ರಾತ್ರಿ ವಿಶಾಖಪಟ್ಟಣದಲ್ಲಿ ಹೃದಯಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಬೆಂಗಾಲ್ ಕ್ರಿಕೆಟ್ ಅಸೊಸಿಯೇಷನ್ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿನೂ ಮಂಕಡ್ ಟ್ರೋಫಿ ಪಂದ್ಯವಾಡಲು ಆಗಮಿಸಿದ್ದ ಬಂಗಾಳಿ ತಂಡದ ಕೋಚ್ ಆಗಿ ಬಂದಿದ್ದರು. ನಿನ್ನೆ ರಾತ್ರಿ ಊಟ ಮಾಡಿದ ನಂತರ ವಾಕ್ ಮಾಡುತ್ತಿದ್ದ ಅವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Facebook Comments