ಬಿಜೆಪಿ ಮಾಜಿ ಶಾಸಕ ಕೊರೋನಾಗೆ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಫಲ್ಗಾರ್,ಏ.12- ಕೊರೊನಾದಿಂದ ಆಸ್ಪತ್ರೆ ಸೇರಿದ್ದ ಇಲ್ಲಿನ ಮಾಜಿ ಶಾಸಕ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಫಲ್ಘಾರ್ ಜಿಲ್ಲೆಯ ಧಗರು ಕ್ಷೇತ್ರ ಮಾಜಿ ಬಿಜೆಪಿ ಶಾಸಕ ಧನರೀ (49) ಇಂದು ಮುಂಬೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೊರೊನಾದಿಂದ ತೀವ್ರ ಜ್ವರದಿಂದಾಗಿ ಮೊದಲು ಗುಜರಾತ್‍ನ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಮುಂಬೈ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆ ತರಲಾಗಿತ್ತು. ಪತ್ನಿ , ಇಬ್ಬರು ಪುತ್ರಿಯರು, ಒಬ್ಬನನ್ನು ಧನರಿ ಅಗಲಿದ್ದಾರೆ.

# ಸಚಿವರಿಗೆ ಕೊರೋನಾ :
ಕೇಂದ್ರ ಸಚಿವ ಸಂಜೀವ್ ಪಾಲ್ಯಾರ್ ಅವರಿಗೆ ಕೊರೊನಾ ದೃಢಪಟ್ಟಿದೆ. ಪಶ್ಚಿಮಬಂಗಾಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗೊಗಿಕೊಂಡಿದ್ದ ಸಂಜೀವ್ ಅವರಿಗೆ ನಿನ್ನೆ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಒಳಪಟ್ಟಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ನನ್ನ ಜೊತೆ ಇದ್ದವರು ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಚ್ಚರಿಕೆ ವಹಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin