ಯುವತಿಗೆ ಗನ್ ತೋರಿಸಿ ಬಿಲ್ಡಪ್ ಕೊಟ್ಟ ಮಾಜಿ ಸಂಸದರ ಪುತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

Gun--01

‘ಹೊಸದಿಲ್ಲಿ. ಅ.16 : ಕ್ಷುಲ್ಲಕ ವಿಚಾರಕ್ಕೆ ಬಿಎಸ್‍ಪಿ ಮಾಜಿ ಸಂಸದರ ಪುತ್ರನೊಬ್ಬ ಯುವತಿಗೆ ಗನ್ ತೋರಿಸಿ ಆತಂಕ ಸೃಷ್ಟಿಸಿದ ಘಟನೆ ರಾಷ್ಟ್ರ ರಾಜಧಾನಿ ದಕ್ಷಿಣ ದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ‘ಬಿಎಸ್‌ಪಿ ನಾಯಕ, ಮಾಜಿ ಸಂಸದ ರಾಕೇಶ್‌ ಪಾಂಡೆ ಅವರ ಪುತ್ರ ಆಶಿಶ್‌ ಪಾಂಡೆ ಹೊಸದಿಲ್ಲಿಯ ಪಂಚತಾರಾ ಹೋಟೆಲ್‌ನಲ್ಲಿ ಪಿಸ್ತೂಲು ಝಳಪಿಸುವ ದೃಶ್ಯಗಳು ವೈರಲ್‌ ಆಗಿದ್ದು, ಪ್ರಕರಣ ದಾಖಲಿಸಲಾಗಿದೆ. ಈತನ ಸಹೋದರ ರಿತೇಶ್‌ ಪಾಂಡೇ ಉತ್ತರ ಪ್ರದೇಶದ ಹಾಲಿ ಶಾಸಕರಾಗಿದ್ದಾರೆ. ಆಶಿಶ್‌ ಪಾಂಡೆ ಮತ್ತು ಸ್ನೇಹಿತರು ಪಂಚತಾರಾ ಹೋಟೆಲ್‌ನ ನೈಟ್‌ ಕ್ಲಬ್‌ನಲ್ಲಿ ಪಾರ್ಟಿ ಮಾಡಲು ಹೋದಾಗ ವಾಶ್‌ ರೂಮ್‌ನಲ್ಲಿ ಜಗಳ ಹುಟ್ಟಿಕೊಂಡಿದೆ.

ಆಶಿಶ್‌ನ ಸ್ನೇಹಿತರು ಕೆಲವರ ಮೇಲೆ ಹಲ್ಲೆ ನಡೆಸಿದ್ದರು. ಒಂದು ಹಂತದಲ್ಲಿ ಆಶಿಶ್‌ ಜತೆಗಿದ್ದ ಯುವತಿ ಮತ್ತೊಂದು ತಂಡದವರನ್ನು ‘ತೃತೀಯ ಲಿಂಗಿಗಳು’ ಎಂದು ಮೂದಲಿಸಿದ್ದಳು. ಜಗಳ ಪ್ರಧಾನ ಲಾಂಜ್‌ ಕಡೆಗೂ ಬಂದಿದ್ದು, ಅಲ್ಲಿ ಆಶಿಶ್‌ ಪಾಂಡೆ ಪಿಸ್ತೂಲು ಎತ್ತಿದ್ದಾನೆ. ಆಶಿಶ್ ಗನ್ ತೆಗೆದು ರಂಪಾಟ ನಡೆಸುತ್ತಿದ್ದನ್ನು ಕಂಡ ಹೋಟೆಲ್‍ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಹೋಟೆಲ್ ಸಿಬ್ಬಂದಿ ತಕ್ಷಣ ಎಚ್ಚತ್ತುಕೊಂಡಿದ್ದರಿಂದ ಆಗಬಹುದಾಗಿದ್ದ ಅನಾಹುತ ತಪ್ಪಿದೆ. ಅಲ್ಲದೇ ಆಶಿಶ್ ಪಾಂಡೆ ಗನ್ ಹಿಡಿದು ಪುಂಡಾಟ ಮೆರೆದ 1 ನಿಮಿಷಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಈ ಘಟನೆ ಅಕ್ಟೋಬರ್ 14ರ ಭಾನುವಾರದಂದು ನಡೆದಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೆ ಎಚ್ಚೆತ್ತಾ ದೆಹಲಿ ಪೊಲೀಸರು, ಸಾರ್ವಜನಿಕ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತೋರಿ ದರ್ಪ ಮೆರೆದ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.   ರಾಜಕಾರಣಿಯ ಮಗ ಪಾಲ್ಗೊಂಡಿರುವ ಪ್ರಕರಣವಾಗಿದ್ದರಿಂದ ಭಾರಿ ಮಹತ್ವ ಪಡೆದಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ಸಹಾಯಕ ಗೃಹ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

Facebook Comments