ಮಾಜಿ ಮುಖ್ಯಮಂತ್ರಿ ಕೋನಿಜೇಟಿ ರೋಸಯ್ಯ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಡಿ.4: ಅವಿಭಾಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರಸ್ ಧುರೀಣ ಕೋನಿಜೇಟಿ ರೋಸಯ್ಯ ಅವರು ಇಂದು ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಅವರಿಗೆ 88 ವಯಸ್ಸಾಗಿತ್ತು ಇಂದು ಬೆಳಿಗ್ಗೆ ಅಸ್ವಸ್ಥಗೊಂಡ ರೋಸಯ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟರು.

ರೋಸಯ್ಯ ಅವರು 2011ರ ಆಗಸ್ಟ್ 31ರಿಂದ 2016ರ ಆಗಸ್ಟ್ 30ರ ತನಕ ತಮಿಳುನಾಡು ರಾಜ್ಯಪಾಲರಾಗಿದ್ದರು. ಅಲ್ಪಕಾಲ ಕರ್ನಾಟಕದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು. 1968ರಲ್ಲಿ ಎಂಎಲ್‍ಸಿಯಾಗಿ ರೋಸಯ್ಯ ಅವರ ರಾಜಕೀಯ ಯಾನ ಆರಂಭವಾಯಿತು. ವೈ.ಎಸ್. ರಾಜಶೇಖರರೆಡ್ಡಿ ಅವರ ನಿಧನ ನಂತರ ರೋಸಯ್ಯ ಕೊಂಚ ಅವಧಿಗೆ (ಸುಮಾರು ಎರಡೂವರೆ ತಿಂಗಳ ಕಾಲ) ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು.

ರೋಸಯ್ಯ ಅವರ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಕರಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ರೋಸಯ್ಯ ಅವರು ತಾವು ನಿರ್ವಹಿಸಿದ ಹುದ್ದೆಗಳೆಲ್ಲದಕ್ಕೆ ಘನತೆ ತಂದು ಕೊಟ್ಟಂತ ನಾಯಕ ಅವರು ಸಹನೆ, ಸೌಜನ್ಯ ಮತ್ತು ಸರಳತೆಗೆ ಹೆಸರಾಗಿದ್ದರು ಎಂದುರಾಹುಲ್ ಸ್ಮರಿಸಿಕೊಂಡಿದ್ದಾರೆ.

ಕಾಂಗ್ರೆಸ್‍ನ ಹಲವಾರು ನಾಯಕರು ಮತ್ತು ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ ಅವರು ರೋಸಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರೋಸಯ್ಯ ಅವರು ಅವಿಭಾಜಿತ ಆಂಧ್ರಪ್ರದೇಶದ ಹಣಕಾಸು ಸಚಿವರಾಗಿ 15 ಬಾರಿ ರಾಜ್ಯ ಬಜೆಟ್ ಮಂಡಿಸಿದ ಕೀರ್ತಿ ಹೊಂದಿದ್ದಾರೆ ಎಂದು ರೆಡ್ಡಿ ಹೇಳಿಕೆಯಲ್ಲಿ ನೆನೆಸಿದ್ದಾರೆ.

Facebook Comments