ನೂತನ ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಎಸ್ಎಂಕೆ ಅಭಿನಂದನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿನಂದಿಸಿದ್ದಾರೆ.  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ ದಲ್ಲಿ ಹಾಗೂ ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ನಾಡಿನ ಜನರ ಹಿತರಕ್ಷಣೆಗೆ ಕಟಿಬದ್ಧವಾಗಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಕೃಷ್ಣ ಅವರು ನಾನು ಮತ್ತು ನಿಮ್ಮ ತಂದೆಯವರು ಆತ್ಮೀಯ ಮಿತ್ರರಾಗಿದ್ದೆವು. ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರು ಹಲವು ಬಾರಿ ನನಗೆ ಮಾರ್ಗದರ್ಶಕರಾಗಿ, ಹಿತೈಷಿಗಳಾಗಿದ್ದದ್ದು ಅದಿನ್ನು ಸ್ಮೃತಿ ಪಟಲದಲ್ಲಿ ಉಳಿದಿದೆ.

ಸಜ್ಜನ, ಸೌಮ್ಯ ರಾಜಕಾರಣಿಯಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಸುಮಧುರ ಸಂಬಂಧ ಹೊಂದಿದ್ದ ನಿಮ್ಮ ತಂದೆಯವರಂತೆ ತಾವೂ ಕೂಡ ಅವರ ದಾರಿಯಲ್ಲಿ ಮುನ್ನಡೆದು ಎಲ್ಲರ ವಿಶ್ವಾಸ ಗಳಿಸಿ ಯಶಸ್ವಿಯಾಗಿ ಆಡಳಿತ ನಡೆಸುವಂತಾಗಲಿ ಎಂದು ಕೃಷ್ಣ ಅವರು ಹಾರೈಸಿದ್ದಾರೆ.

ಇಂದು ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬೊಮ್ಮಾಯಿ ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Facebook Comments