ಮಾಜಿ ಕ್ರಿಕೆಟಿಗ ವೆಂಕಟೇಶ್‍ ಪ್ರಸಾದ್‍ಗೆ 52ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.5- ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ತರಬೇತುದಾರ ವೆಂಕಟೇಶ್ ಪ್ರಸಾದ್ ಇಂದು 52ನೆ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಬಿಸಿಸಿಐ ಸೇರಿದಂತೆ ಕ್ರಿಕೆಟ್ ರಂಗದ ಹಲವು ಕಲಿಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ಐಪಿಎಲ್‍ನ ಆರಂಭಿಕ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿರುವ ವೆಂಕಟೇಶ್ ಪ್ರಸಾದ್, ನಂತರ ಕಿಂಗ್ಸ್ ಇಲೆವೆನ್ ಪಂಜಾಬ್‍ನ ಬೌಲಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಹಾಕಿ ತಂಡಕ್ಕೆ ಶುಭ ಕೋರಿದ ವೆಂಕಿ:
ನನ್ನ ಹುಟ್ಟುಹಬ್ಬದ ದಿನದಂದೇ ಭಾರತದ ಪುರುಷ ಹಾಕಿ ತಂಡವು ಕಂಚಿನ ಪದಕವನ್ನು ಗೆದ್ದಿರುವುದು ನನ್ನ ಸಂತಸವನ್ನು ಹೆಚ್ಚಿಸಿದೆ. ಪಾಕಿಸ್ತಾನ ತಂಡದ ವಿರುದ್ಧ ಸಿಂಹಸ್ವಪ್ನವಾಗಿದ್ದ ವೆಂಕಟೇಶ್ ಪ್ರಸಾದ್ ಅವರು 33 ಟೆಸ್ಟ್ ಪಂದ್ಯಗಳಲ್ಲಿ 203 ರನ್ ಹಾಗೂ 96 ವಿಕೆಟ್ ಕಬಳಿಸಿದರೆ, ಏಕದಿನ ಕ್ರಿಕೆಟನಲ್ಲಿ 161ಪಂದ್ಯಗಳಿಂದ 196 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

Facebook Comments