ಭಾರತದ ಮಾಜಿ ಕ್ರೀಡಾಪಟು ಇಕ್ಬಾಲ್ ಸಿಂಗ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಆ.26- ತನ್ನ ತಾಯಿ ಹಾಗೂ ಪತ್ನಿಯನ್ನು ಕೊಂದ ಆರೋಪದ ಹಿನ್ನೆಲೆಯಲ್ಲಿ ಭಾರತದ ಮಾಜಿ ಶಾಟ್ ಪುಟ್ ಕ್ರೀಡಾಪಟು ಇಕ್ಬಾಲ್ ಸಿಂಗ್ ಅವರನ್ನು ಇಲ್ಲಿನ ಪೊಲೀಸರು ಬಂಸಿದ್ದಾರೆ.

ವಾಷಿಂಗ್ಟನ್‍ನ ರಾಕ್‍ಹುಡ್ ರಸ್ತೆಯಲ್ಲಿ ಅವರ ನಿವಾಸದಿಂದ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಪತ್ನಿ ಹಾಗೂ ಮಕ್ಕಳನ್ನು ಮಾರಕಾಸ್ತ್ರಗಳಿಂದ ಇರಿದು ನಂತರ ಅವರೂ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿರಬಹುದೆಂದು ಶಂಕಿಸಲಾಗಿದೆ.

ರಕ್ತದ ಮಡುವಿನಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ವಿಚಾರಣೆ ವೇಳೆ ಇವರೇ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭಾನುವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ವಾಷಿಂಗ್ಟನ್‍ನಲ್ಲಿ ಸಿಂಗ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Facebook Comments

Sri Raghav

Admin