ಯಾರೇ ಸಿಎಂ ಆದರೂ ನಮಗೆ ಆತಂಕವಿಲ್ಲ : ಎಂಟಿಬಿ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27- ರಾಜ್ಯದಲ್ಲಿ ಯಾರೇ ಮುಂದಿನ ಮುಖ್ಯಮಂತ್ರಿಯಾದರೂ ನಮಗೆ ಆತಂಕವಿಲ್ಲ ಎಂದು ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮಂತ್ರಿಸ್ಥಾನ ಕೊಟ್ಟರೂ ಸಂತೋಷ, ಸಚಿವ ಸ್ಥಾನ ಕೊಡದಿದ್ದರೂ ಸಂತೋಷ. ನಾವೆಲ್ಲರೂ ಒಟ್ಟಾಗಿದ್ದೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ, ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದವು. ಯಡಿಯೂರಪ್ಪ ಅವರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿರುವುದಾಗಿ ಅವರು ಹೇಳಿದರು. ನಾವು ಬಿಜೆಪಿಗೆ ಬಂದಾಗ ಇಂತಹ ಬೆಳವಣಿಗೆಗಳು ಆಗಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಅವರು ತಿಳಿಸಿದರು.

ನಮಗೆ ಯಾವುದೇ ರೀತಿಯ ಆತಂಕವಿಲ್ಲ. ಖುಷಿಯಾಗಿಯೇ ಇದ್ದೇವೆ. ಯಾರೇ ಮುಖ್ಯಮಂತ್ರಿಯಾದರೂ ಉತ್ತಮ ಆಡಳಿತ ನೀಡಬೇಕು ಅಷ್ಟೇ. ರಾಜಕೀಯವಾಗಿ ಏಳು-ಬೀಳುಗಳನ್ನು ಕಂಡಿರುವ ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಭಾವುಕರಾಗಿದ್ದರು ಅಷ್ಟೇ ಎಂದು ಅವರು ಹೇಳಿದರು.

Facebook Comments