ಕಾರು ಅಪಘಾತ : ಪ್ರಾಣಾಪಾಯದಿಂದ ಪಾರಾದ ಮಾಜಿ ಶಾಸಕರ ಫ್ಯಾಮಿಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ಆ.10- ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಮೈಸೂರಿನಿಂದ ಹುಣಸೂರಿಗೆ ಬರುತ್ತಿದ್ದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಬಿಳಿಕೆರೆಯ ಹೊಸೂರಮ್ಮ ದೇವಾಲಯದ ಬಳಿ ಡಿವೈಡರ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಪುತ್ರಿ ಲಕ್ಷ್ಮೀ ಮಾನಸ, ಸಹೋದರ ಡಾ.ಶ್ರೀನಾಥ್, ಪುತ್ರಿ ಶ್ರೇಯಾ ಹಾಗೂ ನಾದಿನಿ, ರಾಜ್ಯ ಮಹಿಳಾ ಕೆಪಿಸಿಸಿ ಘಟಕದ ಅಧ್ಯಕ್ಷೆ ಡಾ.ಪುಷ್ಪಾಅಮರನಾಥ್ ಪುತ್ರಿ ಚಿನ್ಮಾಯಿಜೋಷಿ ಹಾಗೂ ಚಾಲಕ ಪ್ರದೀಪ್ ಒಟ್ಟು ಐದು ಮಂದಿಗೂ ತೀವ್ರ ಪೆಟ್ಟು ಬಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಮಾಜಿ ಶಾಸಕರ ಕುಟುಂಬದವರು ಹುಣಸೂರು ಮನೆ ಮತ್ತು ಸಾಯಿಬಾಬಾ ದೇವಾಲಯಕ್ಕೆ ಬರುತ್ತಿದ್ದಾಗದಾರಿ ಮಧ್ಯದಲ್ಲಿ ಬಿಳಿಕೆರೆಯ ಬಳಿ ಮಳೆಯ ನೀರಿನಿಂದ ಗುಂಡಿ ತಪ್ಪಿಸಲು ಹೋದ ಚಾಲಕ ಆಯಾ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಾಗ ಈ ದುರ್ಘಟನೆ ಸಂಭವಿಸಿದೆ.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಮಳೆಯಿಂದ ಆಯಾ ತಪ್ಪಿಈ ಅನಾಹುತ ಆಗಿದೆ, ನಮ್ಮ ಕುಟುಂಬದವರೆಲ್ಲಾ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಮತ್ತು ಪಕ್ಷದ ಮುಖಂಡರು ಸಹ ಮಳೆ ಹಾನಿಯಾದ ಪ್ರದೇಶಕ್ಕೆ ಕೆಲವು ಸಾಮಾಗ್ರಿಗಳ ಜೊತೆ ತೆರಳುತ್ತಿದ್ದವು.

ಅಷ್ಟರಲ್ಲಿ ವಿಷಯ ತಿಳಿದು ವಾಪಸ್ಸು ತೆರಳಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ನನ್ನ ಕುಟುಂಬಕ್ಕಿಂತ ಮಳೆಯ ಹಾನೀಯಾದ ಪ್ರದೇಶದಲ್ಲಿ ಸಿಲುಕಿರುವವರ ಕ್ಷೇಮವು ಮುಖ್ಯವಾಗಿದೆ ಅವರಿಗೆ ಯಾವುದೇ ಸಮಸ್ಯೆಯಾಗದಂತೆ ಮಳೆ ಅವಕಾಶ ಮಾಡಿಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.

Facebook Comments

Sri Raghav

Admin