ಬೆಳೆ ನಾಶವಾಗಿದ್ದಕ್ಕೆ ಆತ್ಮಹತ್ಯೆಗೆ ಮುಂದಾದ ರೈತನ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Former--1
ಮೈಸೂರು, ಜೂ.17- ಮಳೆಯಿಂದ ತುಂಬಿದ್ದ ಕಬಿನಿ ಜಲಾಶಯದಿಂದ ಹರಿಯಬಿಟ್ಟ ನೀರು ಕುಪ್ಪರವಳ್ಳಿಯ ರೈತನ ಜಮೀನಿಗೆ ಹರಿದು ಕಟಾವಿಗೆ ಬಂದಿದ್ದ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ನೊಂದ ರೈತ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದ ಬಸವಯ್ಯ ಎಂಬುವರ ಜಮೀನು ಕಬಿನಿ ಜಲಾಶಯದ ನೀರಿನಿಂದ ತುಂಬಿ ಹೋಗಿದ್ದು, ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ. ಇದನ್ನು ಕಂಡ ರೈತ ಬಸವಯ್ಯ ಜಲಾವೃತಗೊಂಡಿದ್ದ ನೀರಿನಲ್ಲಿಯೇ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಸ್ಥಳೀಯರು ಅವರನ್ನು ನೀರಿನಿಂದ ಎಳೆದು ತಂದು ರಕ್ಷಿಸಿದ್ದಾರೆ.

Facebook Comments

Sri Raghav

Admin