ರಾಜ್ಯದ ಪಾಲಿಗೆ ಇಲ್ಲಿದೆ ತುಸು ನೆಮ್ಮದಿಯ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.23- ಹಲವು ವರ್ಷಗಳ ನಂತರ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ಕೊರೊನಾ ಸೋಂಕು ಹಾಗೂ ವಿಪರೀತ ಮಳೆ ನಡುವೆ ಈ ಸುದ್ದಿ ತುಸು ನೆಮ್ಮದಿ ತರಿಸಿದೆ.ಕಳೆದ ಒಂದೂವರೆ ವರ್ಷಗಳಲ್ಲಿ 746 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು, 2019-20ರಲ್ಲಿ 1076 ಪ್ರಕರಣಗಳು ಪತ್ತೆಯಾಗಿತ್ತು.

ರಾಜ್ಯದ ಕೃಷಿ ಇಲಾಖೆಯಲ್ಲಿರುವ ಮಾಹಿತಿ ಪ್ರಕಾರ ಏಪ್ರಿಲ್ 2020 ಹಾಗೂ ಸೆಪ್ಟೆಂಬರ್ 2021ರ ನಡುವೆ 746 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಳೆದ ವರ್ಷ ದೇಶದಲ್ಲಿ ಒಟ್ಟಾರೆ 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ ಸಂಭವಿಸಿದ 10,349 ರೈತರ ಆತ್ಮಹತ್ಯೆಗೆ ಹೋಲಿಸಿದರೆ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಇಳಿಕೆ ಕಂಡಿದೆ. 2017ರಲ್ಲಿ 10,665, 2016ರಲ್ಲಿ 11,379 ರೈತ ಆತ್ಮಹತ್ಯೆ ಪ್ರಕರಣಗಳು ಇದ್ದವು.

ಉತ್ತರ ಕರ್ನಾಟಕ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಿವೆ. ಹೆಚ್ಚಾಗಿ ಮಳೆಯಾಗುತ್ತಿರುವ ಕಾರಣ ಇಳುವರಿಯೂ ಹೆಚ್ಚಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಜಮೀನಿನಲ್ಲಿ ಉತ್ತಮ ಇಳುವರಿ ಸಿಕ್ಕದೆ, ಅವ್ಯಾಹತ ಮಳೆ, ಸಾಲದಿಂದ ನೊಂದು ರೈತರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಜ್ಞರು ಹೇಳುತ್ತಾರೆ.

ಕಳೆದ ಕೆಲ ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗುತ್ತಿದೆ. ಮಳೆ ಬಾರದಿದ್ದರೆ ರೈತರು ಹೂಡಿಕೆ ಮಾಡಿದ್ದಕ್ಕೆ ಶೇಕಡಾ 50ರಷ್ಟು ಕೂಡ ಇಳುವರಿ ಸಿಗುವುದಿಲ್ಲ. ಉತ್ತಮ ಮಳೆಯಾದರೆ ರೈತರ ಅರ್ಧ ಸಮಸ್ಯೆ ದೂರವಾಗುತ್ತದೆ. ಇದರಿಂದಾಗಿ ಆತ್ಮಹತ್ಯೆ ಪ್ರಕರಣಗಳು ಅಲ್ಲಲ್ಲಿ ಸಂಭವಿಸುತ್ತವೆ. ಸಾಮಾಜಿಕ-ಆರ್ಥಿಕ ಕಾರಣಗಳು ಕೂಡ ರೈತರ ಆತ್ಮಹತ್ಯೆಗೆ ಹಲವು ಬಾರಿ ಕಾರಣವಾಗುತ್ತವೆ ಎಂಬುದು ತಜ್ಞರ ಅಭಿಪ್ರಾಯವಗಿದೆ.

ಉತ್ತಮ ಮಳೆಯಾದರೆ ರಾಜ್ಯದಲ್ಲಿ 150 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯಾಗುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಕಳಪೆ ಗುಣಮಟ್ಟದ ಬೀಜ ವಿತರಣೆಯಿಂದಾಗಿ ರೈತರಿಗೆ ಉತ್ತಮ ಇಳುವರಿ ಸಿಕ್ಕಿಲ್ಲ. ಇದು ಕೂಡ ರೈತರ ಆತ್ಮಹತ್ಯೆಗೆ ಮುಖ್ಯ ಕಾರಣವಾಗುತ್ತದೆ.

ಕಳೆದ ಎರಡು ವರ್ಷಗಳಲ್ಲಿ ನಾವು 10 ಲಕ್ಷ ಟನ್ ಕಳಪೆ ಗುಣಮಟ್ಟದ ಆಹಾರ ಪದಾರ್ಥ ವಶಪಡಿಸಿಕೊಂಡಿದ್ದೇವೆ. ಈ ಸಂಬಂಧ ವ್ಯಕ್ತಿಗಳು ಮತ್ತು ಕಂಪೆನಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದೇವೆ. ಬೀಜ ಕಳಪೆ ಗುಣಮಟ್ಟದ್ದಾಗಿದ್ದರೆ ಇಳುವರಿ ಶೇಕಡಾ 60ಕ್ಕಿಂತ ಹೆಚ್ಚು ಬರುವುದಿಲ್ಲ, ಇದು ರೈತರನ್ನು ಕಂಗೆಡಿಸುತ್ತದೆ ಎಂದು ಅಕಾರಿಗಳು ಹೇಳುತ್ತಾರೆ.

ಉತ್ತಮ ಮಳೆಯಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ಕೃಷಿ ಕಾನೂನುಗಳು ರೈತರಿಗೆ ಉತ್ತಮ ಮಾರುಕಟ್ಟೆ ಪಡೆಯಲು ಸಹಕಾರಿಯಾಗಿವೆ. ನಮ್ಮ ಅಕಾರಿಗಳು ಹೆಚ್ಚು ಜಾಗರೂಕರಾಗಿದ್ದಾರೆ, ಕೃಷಿ ಉತ್ಪನ್ನಗಳ ಅಂತಾರಾಜ್ಯ ಚಲನೆಗೆ ಯಾವುದೇ ತೆರಿಗೆ ಇಲ್ಲ. ನಾವು ಆರಂಭಿಸಿರುವ ಆಹಾರ ಸಂಸ್ಕರಣಾ ಘಟಕಗಳತ್ತ ಗಮನಹರಿಸಬೇಕು, ಇದು ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುತ್ತದೆ.

ಇನ್ನು ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 3,927 ರೈತರು ಸಾವಿಗೆ ಶರಣಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶದಲ್ಲಿ 1,029 ರೈತರು ಪ್ರಾಣ ಕಳೆದುಕೊಂಡಿದ್ದರು.

Facebook Comments

Sri Raghav

Admin