ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಕೀಟನಾಶಕ ಸರಬರಾಜಿಗೆ ವಿನಾಯಿತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಕೇಂದ್ರ ಮತ್ತು ರಾಜ್ಯ ಸರ್ಕಾರವು ಕರೋನಾ ಪರಿಣಾಮದಿಂದ ಉಂಟಾದ ಲಾಕ್ ಡೌನ್ ನಿಂದ ಕೃಷಿ ಚಟುವಟಿಕೆ ಮತ್ತು ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳ ಸರಬರಾಜಿಗೆ ವಿನಾಯಿತಿ ನೀಡಿದೆ.

ಗೃಹ ಇಲಾಖೆಯು “ವಿಪತ್ತು ನಿರ್ವಹಣಾ ಕಾಯ್ದೆ” ಅಡಿಯಲ್ಲಿ ಈ ಬಗ್ಗೆ ಆದೇಶ ಹೊರಡಿಸಿದ್ದು, ಇದರಿಂದ ಎಂದಿನಂತೆ ರಸಗೊಬ್ಬರ, ಕೃಷಿ ಸಂಬಂಧಿತ ತಯಾರಿಕೆ ಹಾಗೂ ಉಪ-ಘಟಕಗಳು ಕಾರ್ಯನಿರ್ವಹಿಸಲಿವೆ.

ಅದರಂತೆಯೇ ರಸಗೊಬ್ಬರ, ಕೀಟನಾಶಕ, ಮಾರಾಟ ಮಳಿಗೆಗಳು ಕೂಡ ಕಾರ್ಯನಿರ್ವಹಿಸಲಿವೆ. ಕೃಷಿಕರು, ಕೃಷಿಕಾರ್ಮಿಕರು ಕೈಗೊಳ್ಳುವ ಕೃಷಿಕಾರ್ಯಕ್ಕೆ ಯಾವುದೇ ದಿಗ್ಬಂಧನ ಅನ್ವಯಿಸುವುದಿಲ್ಲ. ಬೆಳೆಕೊಯ್ಲು ಯಂತ್ರೋಪಕರಣಗಳ ಸಾಗಣೆಗೆ ಅಡಚಣೆ ಇಲ್ಲ. ಕೃಷಿ ಉತ್ಪನ್ನ ಮಾರಾಟ, ಖರೀದಿ, ಸಾಗಣೆಗೆ ನಿರ್ಬಂಧ ಇಲ್ಲ.

ರಾಜ್ಯದ ಕೃಷಿಕರಿಗೆ ಸರ್ಕಾರದ ವತಿಯಿಂದ ಕೃಷಿ ಚಟುವಟಿಕೆ, ಕೃಷಿ ಉತ್ಪನ್ನ, ಉಪಕರಣಗಳ ಸಾಗಣೆಗೆ ಪ್ರತ್ಯೇಕ ಪಾಸ್ ನೀಡಲಾಗುವುದು. ಈ ಪಾಸ್ ಗಳನ್ನು ಪಡೆಯಲು ರೈತರು, ಕೃಷಿ ಸಂಬಂಧಿತ ಉತ್ಪಾದಕರು ಆಯಾ ಪ್ರದೇಶಗಳಿಗೆ ಅನ್ವಹಿಸುವಂತೆ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ವರಿಷ್ಠಾಧಿಕಾರಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೃಷಿ ಅಧಿಕಾರಿಗಳ ಕಛೇರಿಗಳನ್ನು ಸಂಪರ್ಕಿಸಬಹುದು.

ಕೃಷಿ ಉತ್ಪನ್ನಗಳ ಸಾಗಣೆಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ರೈತರಿಗೆ ತೊಂದರೆ ಕೊಟ್ಟರೆ ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬಹುದು.

Facebook Comments

Sri Raghav

Admin