ಮಹಿಳೆಯ ಅಂಡಾಶಯದಲ್ಲಿತ್ತು ಬರೋಬ್ಬರಿ 7.5 ಕೆ.ಜಿ. ಗಡ್ಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಮಹಿಳೆಯ ಅಂಡಾಶಯದಲ್ಲಿ ಪತ್ತೆಯಾದ ಬರೋಬ್ಬರಿ 7.5 ಕೆ.ಜಿ. ತೂಕದ ಗಡ್ಡೆಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆರವುಗೊಳಿಸಿದೆ. ಸ್ತ್ರೀರೋಗ ಶಾಸ್ತ್ರ ಹಿರಿಯ ಸಲಹೆಗಾರರಾದ ಮನೀಶಾ ಸಿಂಗ್ ಅವರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.

ಈ ಕುರಿತು ಮಾತನಾಡಿದ ವೈದ್ಯೆ ಡಾ. ಮನೀಶಾ ಸಿಂಗï, 43 ವರ್ಷದ ಮಹಿಳೆಯೊಬ್ಬರು ಹೊಟ್ಟೆ ಉಬ್ಬಸದ ಆರೋಗ್ಯ ಸಮಸ್ಯೆ ಹೊಂದಿದ್ದರು. ಕೇವಲ 6 ತಿಂಗಳಲ್ಲಿ ಅವರ ಹೊಟೆಯು ಊದಿದಂತಾಗಿದೆ. ಅವರನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‍ಗೆ ಒಳಪಡಿಸಿದ ಬಳಿಕ ಅವರ ಹೊಟ್ಟೆಯಲ್ಲಿ 2825 ಸೆ.ಮೀ ಅಳತೆಯ 7.5 ಕೆ.ಜಿ. ತೂಕದ ಗಡ್ಡೆ ಬೆಳೆದು ನಿಂತಿತ್ತು.

ಇದನ್ನ ಹಾಗಿಯೇ ಬಿಟ್ಟಿದ್ದರೆ ಅಂಡಾಶಯ ಕ್ಯಾನ್ಸರ್‍ಗೆ ಕಾರಣವಾಗುವ ಸಾಧ್ಯತೆ ಹೆಚ್ಚಿತ್ತು. ಅಷ್ಟರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಗಡ್ಡೆ ಹೊರ ತೆಗೆಯಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಕೇವಲ 4 ದಿನಗಳಲ್ಲಿ ಮಹಿಳೆಯು ಆಸ್ಪತ್ರೆಯಿಂದ ಡಿಸ್ಟಾರ್ಚ್ ಆಗಿದ್ದು, ಆರೋಗ್ಯವಾಗಿದ್ದಾರೆ ಎಂದರು.

ಇಂಥಹ ಪ್ರಕರಣಗಳು ವಿರಳ. ಆದರೆ, ಮಹಿಳೆಯರು ಕೇವಲ ಬೊಜ್ಜು ಎಂದು ಕಡೆಗಣಿಸದೇ ಆಗಾಗ್ಗೇ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ತಾವು ದಪ್ಪವಿರಲು ಕಾರಣವನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

Facebook Comments