ಗಂಡು ಮಗುವಿಗೆ ಹಂಬಲಿಸಿದ ತಾಯಿಗೆ ನಾಲ್ಕು ಮಕ್ಕಳ ವರ…!

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ :  ಮೂರು ಮಕ್ಕಳ ತಾಯಿ ಗಂಡು ಮಗು ಬೇಕೆಂದು ಬಯಸಿ ಟೆಸ್ಟ್‍ಟ್ಯೂಬ್(ಪ್ರನಾಳ ಶಿಶು) ಮೊರೆ ಹೋಗಿ ಏಕ ಕಾಲಕ್ಕೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಪ್ರಸಂಗವೊಂದು ವಿಜಯಪುರದ ಮುದನೂರು ಆಸ್ಪತ್ರೆಯಲ್ಲಿ ನಡೆದಿದೆ.

ದಾಲಿಬಾಯಿ ಸಗನಲಾಲ್ ಸಂದೇಶ ಎಂಬುವರೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಮಹಾತಾಯಿ. ಸಿಜೇರಿಯನ್ ಮೂಲಕ ಶಿಶುಗಳನ್ನು ಹೊರತೆಗೆಯಲಾಗಿದ್ದು, ಅವುಗಳಲ್ಲಿ ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳಾಗಿವೆ.

ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ. ರಾಜಸ್ಥಾನದ ಮೂಲದ ಜಾಲೋರ್ ಜಿಲ್ಲೆಯ ನೌಸ್ರಾ ಗ್ರಾಮದವರಾದ ದಾಲಿಬಾಯಿ, ಪ್ರೇಶರ್ ಕುಕ್ಕರ್, ಸೇಲ್ಸ್ ಅಂಡ್ ಸರ್ವೀಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಇವರಿಗೆ ಈ ಮೊದಲೇ ಒಂದು ಗಂಡು ಹಾಗೂ ವಿವಾಹಿತೆ ವಿಮಲಾ(21), ಗುಡ್ಡಿ (19) ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಲಲಿತ್ ಎಂಬ 16 ವರ್ಷದ ಮಗ ಮೃತಪಟ್ಟಿದ್ದ. ಹೀಗಾಗಿ ತಮ್ಮನ್ನು ನೋಡಿಕೊಳ್ಳಲು ಗಂಡು ಮಗು ಬೇಕೆಂದು ಟೆಸ್ಟ್‍ಟ್ಯೂಬ್ ಚಿಕಿತ್ಸೆ ತೆಗೆದುಕೊಂಡಿದ್ದರು. ಇದೀಗ 8 ತಿಂಗಳು ಕೊನೆಯಲ್ಲಿ ನಾಲ್ಕು ಮಕ್ಕಳಿಗೆ ದಾಲಿಬಾಯಿ ಜನ್ಮ ನೀಡಿದ್ದಾರೆ.

ಮೂರು ಮಕ್ಕಳ ಬಳಿಕ ಆಪರೇಷನ್ ಮಾಡಿಸಿದ್ದರು. ಆದರೆ, ಗಂಡು ಮಗು ಸತ್ತಾಗ ಪುನರ್ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ದಾಲಿಬಾಯಿ ಕುಟುಂಬ ವಿಜಯಪುರಕ್ಕೆ ಬಂದು 20 ವರ್ಷ ಕಳೆದಿದ್ದು, ಇಂಡಿ ರೋಡಿನ ರಾಜ್ ರತನ್ ಕಾಲೋನಿಯಲ್ಲಿ ಸ್ವಂತ ಮನೆಯಿದೆ.

Facebook Comments