ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ಕರ್ನಾಟಕದ ನಾಲ್ವರು ಅಪಘಾತದಲ್ಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಆ.30- ತಿರುಪತಿಯ ಬಾಲಾಜಿ ದರ್ಶನ ಮಾಡಲು ತೆರಳುತ್ತಿದ್ದ ಭಕ್ತರಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಬಲಿಯಾಗಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಲಿಜಪಲ್ಲಿ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು ಮೃತಪಟ್ಟವರೆಲ್ಲರೂ ಕರ್ನಾಟಕದವರೆಂದು ತಿಳಿದುಬಂದಿದೆ.

ಕರ್ನಾಟಕದಿಂದ ಆಂಧ್ರಪ್ರದೇಶದಲ್ಲಿರುವ ತಿರುಪತಿಯ ದರ್ಶನ ಮಾಡಲೆಂದು ತೆರಳುತ್ತಿದ್ದ ಕಾರು ಬಂಗಾರು ಪಾಲೆಂ ಮಂಡಲಂನ ಬಲಿಜಪಲ್ಲಿ ಬಳಿ ಚಲಿಸುತ್ತಿದ್ದ ಲಾರಿಯನ್ನು ಓವರ್‍ಟೇಕ್ ಮಾಡುವ ಭರದಲ್ಲಿ ಈ ದುರಂತ ಸಂಭವಿಸಿದೆ.

ಅಪಘಾತವಾದ ತಕ್ಷಣ ಕಾರು ಲಾರಿಯ ಕೆಳಗಡೆ ಉರುಳಿದ ಪರಿಣಾಮ ಅದರಲ್ಲಿದ್ದವರೆಲ್ಲರೂ ಕಾರಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಲಿಜಪಲ್ಲಿ ಪೊಲೀಸರು ಕಾರನ್ನು ಹೊರತೆಗೆದು ಮೃತಪಟ್ಟವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin