ನಾಲ್ವರು ಕಳ್ಳರ ಬಂಧನ, 10 ಬೈಕ್‍ಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಸೆ.11- ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ 10 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಖಲಂದರ್, ರಹೀಮ್, ನಯೀಂಖಾನ್ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಆ.31ರಂದು ಬೆಳಗ್ಗೆ 9 ಗಂಟೆಯಲ್ಲಿ ಕೆ.ಟಿ.ಜೆ.ನಗರ ಠಾಣೆ ಪಿಎಸ್‍ಐ ಅಬ್ದುಲ್ ಖಾದರ್ ಜಿಲಾನಿ ಅವರು ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಈರುಳ್ಳಿ ಮಾರ್ಕೆಟ್ ಕಡೆಯಿಂದ ಬೈಕ್‍ನಲ್ಲಿ ಬರುತ್ತಿದ್ದ ಇಬ್ಬರು ಪೊಲೀಸರನ್ನು ನೋಡಿ ಬೈಕ್ ತಿರುಗಿಸಿಕೊಂಡು ಪರಾರಿಯಾಗುವಾಗ ಹಿಂಬದಿ ಸವಾರ ಇಳಿದು ಓಡಿದ್ದಾನೆ.

ಈ ವೇಳೆ ಪೊಲೀಸರು ಹಿಂಬಾಲಿಸಿ ಬೈಕನ್ನು ಹಿಡಿದು ವಿಚಾರಿಸಿದಾಗ ಬೈಕ್ ಕಳ್ಳತನ ಮಾಡಿರುವುದು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಗೊತ್ತಾಗಿದೆ.

ಈತನನ್ನು ಕೂಲಕಂಷವಾಗಿ ವಿಚಾರಿಸಿ ವಿಚಾರಣೆಗೊಳಪಡಿಸಿ ಮೂವರನ್ನು ಬಂಧಿಸಿ ಆಜಾದ್ ನಗರ ಠಾಣೆಯ ಮೂರು ಪ್ರಕರಣ, ಗಾಂಧಿನಗರ ಠಾಣೆಯ ಎರಡು ಪ್ರಕರಣ, ಹರಿಹರ ನಗರ ಠಾಣೆಯ ಎರಡು ಪ್ರಕರಣಗಳು ಸೇರಿ 10 ಬೈಕ್ ಕಳ್ಳತ ಪ್ರಕರಣ ಸೇರಿದಂತೆ 4 ಲಕ್ಷ ರೂ. ಬೆಲೆ 10 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments