24 ಗಂಟೆಯಲ್ಲಿ 10,732 ಕೊರೋನಾ ಕೇಸ್, ದೆಹಲಿ ಪರಿಸ್ಥಿತಿ ಗಂಭೀರ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.11- ರಾಷ್ಟ್ರರಾಜಧಾನಿ ದೆಹಲಿಯ ಪರಿಸ್ಥಿತಿ ಗಂಭೀರವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 10,732 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಆಪ್ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನವೆಂಬರ್‍ನ ಕೋವಿಡ್ ದಾಖಲೆಯನ್ನು ಇದು ಮೀರಿಸಿದೆ ಎಂದಿರುವ ಅವರು, ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ವ್ಯಾಕ್ಸಿನೇಷನ್ ಡ್ರೈವ್‍ನ್ನು ವಿಸ್ತರಿಸಬೇಕು ಎಂದು ಕೋರಿಕೊಂಡಿದ್ದಾರೆ.

# Related News : 
* ಬಿಗ್ ಬ್ರೇಕಿಂಗ್ : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಫಿಕ್ಸ್..!?
BREAKING : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮುನ್ಸೂಚನೆ ಕೊಟ್ಟ ಸಚಿವ ಸುಧಾಕರ್..!
* ಇಂದಿನಿಂದ ಲಸಿಕಾ ಉತ್ಸವ ಆರಂಭ : ಭಯ ಬಿಟ್ಟು ಲಸಿಕೆ ಪಡೆಯುವಂತೆ ಸಿಎಂ ಮನವಿ

ದೆಹಲಿಯಲ್ಲಿ ಶೇ.65ರಷ್ಟು ಜನರು 35 ವರ್ಷದೊಳಗಿನವಾಗಿದ್ದಾರೆ. ಕೋವಿಡ್ ಹಬ್ಬುವುದನ್ನು ತಡೆಗಟ್ಟಲು ಎಲ್ಲಾ ವಯೋಮಾನದವರಿಗೂ ಲಸಿಕೆಯನ್ನು ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದೇನೆ ಅಲ್ಲದೆ ದೆಹಲಿ ಸರ್ಕಾರ ಜನರ ಮನೆ ಮನೆಗೆ ಹೋಗಿ ಲಸಿಕೆ ಬಗ್ಗೆ ಅರಿವು ಮೂಡಿಸಲು ಸಜ್ಜಾಗಿದೆ ಎಂದರು.

ನಮ್ಮ ಅಪ್ಲಿಕೇಶ್‍ನಗಳ ಮೂಲಕ ಹಾಸಿಗೆಗಳ ಲಭ್ಯತೆಯನ್ನು ಪರಿಶೀಲಿಸುತ್ತೇವೆ. ತೀವ್ರ ತುರ್ತು ಪರಿಸ್ಥಿತಿಗಳಿದ್ದಲ್ಲಿ ಹಾಸಿಗೆ ಒದಗಿಸಲಾಗುವುದು. ಹಾಸಿಗೆಗಳ ಕೊರತೆ ಮತ್ತು ಆಸ್ಪತ್ರೆಯ ನಿರ್ವಹಣೆಯಲಿ ವೈಫಲ್ಯ ಕಂಡುಬಂದರೆ ಲಾಕ್‍ಡೌನ್ ಮಾಡುವ ಚಿಂತನೆ ಇದೆ ಎಂದು ಅವರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಎಲ್ಲಾ ಸಾರ್ವಜನಿಕ ಸಭೆಗಳ ಮೇಲೆ ನಿಷೇಧ ಸೇರಿದಂತೆ ಹೊಸ ನಿರ್ಬಂಧಗಳನ್ನು ಘೋಷಿಸಿರುವ ಅವರು, ನಗರ-ರಾಜ್ಯದ ಎಲ್ಲಾ ಶಾಲೆಗಳು ಮತ್ತು ತರಬೇತಿ ಕೇಂದ್ರ ಸೇರಿದಂತೆ ಇನ್ನಿತರ ಕೇಂದ್ರಗಳನ್ನು ಮುಚ್ಚಲ್ಪಡುತ್ತವೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin