ಫ್ರಾನ್ಸ್‌ನಲ್ಲಿ ಕೊರೊನಾ ಆರ್ಭಟ : ಲಾಕ್‍ಡೌನ್ ಬದಲು ಬೂಸ್ಟರ್ ಡೋಸ್

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾರಿಸ್,ನ.26- ದೇಶದಲ್ಲಿ ಆತಂಕಕಾರಿ ಮಟ್ಟದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈರಸ್ ಪ್ರಕರಣ ನಿಯಂತ್ರಣಕ್ಕೆ ಪುನಃ ಲಾಕ್‍ಡೌನ್ ಅಥವಾ ಕಫ್ರ್ಯೂ ವಿಸುವ ಬದಲಾಗಿ ಎಲ್ಲಾ ವಯಸ್ಕರಿಗೆ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ನೀಡುವ ಯೋಜನೆಗೆ ಫ್ರಾನ್ಸ್ ಚಾಲನೆ ನೀಡಿದೆ.

ಕೊರೊನಾ ವೈರಸ್ ಸೋಂಕುಗಳು ಫ್ರಾನ್ಸ್‍ನಲ್ಲಿ ಕಳೆದ ಕೆಲವು ದಿನಗಳಲ್ಲಿ ಮತ್ತೆ ಏರಿಕೆ ಕಂಡಿದ್ದು, ದೈನಂದಿನ ಪ್ರಕರಣಗಳು 30,000ರ ಗಡಿ ದಾಟಿವೆ ಮತ್ತು ವೈರಸ್‍ಗೆ ಸಂಬಂಸಿ ಆಸ್ಪತ್ರೆಗೆ ದಾಖಲಾಗುವವರು ಹಾಗೂ ಮರಣಿಸುವವರ ಪ್ರಮಾಣದಲ್ಲೂ ಹೆಚ್ಚಳ ಕಂಡು ಬಂದಿದೆ.

ಫ್ರೆಂಚ್ ಆರೋಗ್ಯ ಸಚಿವ ಒಲಿವಿಯರ್ ವೆರಾನ್ ಅವರು ಸುದ್ದಿಗೋಷ್ಠಿಯಲ್ಲಿ ಯೋಜನೆಯನ್ನು ವಿವರಿಸಿದರು. ಎರಡನೇ ಮತ್ತು ಮೂರನೇ ಡೋಸ್‍ನ ನಡುವಿನ ಅಂತರವನ್ನು ಆರರಿಂದ ಐದು ತಿಂಗಳಿಗೆ ಇಳಿಸಿರುವುದಾಗಿ ಅವರು ಪ್ರಕಟಿಸಿದರು. ರಾಷ್ಟ್ರವ್ಯಾಪಿ ಬೂಸ್ಟರ್ ಆಂದೋಲನ ಆರಂಭಿಸಲು ಫ್ರಾನ್ಸ್‍ನಲ್ಲಿ ಸಾಕಷ್ಟು ಲಸಿಕೆಗಳ ಲಭ್ಯತೆ ಇದೆ ಎಂದು ಅವರು ತಿಳಿಸಿದರು.

Facebook Comments